ಸೂಪರ್ ಕಿಂಗ್ಸ್‌ಗೆ ಸಿಡ್ನಿ ಸವಾಲು

7

ಸೂಪರ್ ಕಿಂಗ್ಸ್‌ಗೆ ಸಿಡ್ನಿ ಸವಾಲು

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ): ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಸಿಡ್ನಿ ಸಿಕ್ಸರ್ಸ್‌ ತಂಡದ ಸವಾಲನ್ನು ಎದುರಿಸಲಿದೆ.ಶೇನ್ ವಾಟ್ಸನ್ ಅವರನ್ನೊಳಗೊಂಡ ಆಸ್ಟ್ರೇಲಿಯಾದ ತಂಡ ಸೂಪರ್ ಕಿಂಗ್ಸ್‌ಗೆ ಸವಾಲಾಗಿ ಪರಿಣಮಿಸಲಿದೆ. ವಾಟ್ಸನ್ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದಿದ್ದ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಲ್‌ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಮಾತ್ರವಲ್ಲ `ಟೂರ್ನಿಯ ಶ್ರೇಷ್ಠ ಆಟಗಾರ~ ಎನಿಸಿಕೊಂಡಿದ್ದರು.31ರ ಹರೆಯದ ಈ ಆಟಗಾರ ಚಾಂಪಿಯನ್ಸ್ ಲೀಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಬ್ರಾಡ್ ಹಡಿನ್ ನೇತೃತ್ವದ ತಂಡದಲ್ಲಿ ಮಿಷೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ನಥಾನ್ ಮೆಕ್ಲಮ್ ಮತ್ತು ಮೊಯ್ಸಸ್ ಹೆನ್ರಿಕ್ಸ್ ಅವರಂತಹ ಆಟಗಾರರಿದ್ದಾರೆ. ಇದರಿಂದ ದೋನಿ ಬಳಗಕ್ಕೆ ಗೆಲುವು ಪಡೆಯಬೇಕಾದರೆ ಕಠಿಣ ಪರಿಶ್ರಮ ನಡೆಸುವುದು ಅನಿವಾರ್ಯ.ಐಪಿಎಲ್ ಟೂರ್ನಿಯ `ರನ್ನರ್ ಅಪ್~ ಸೂಪರ್ ಕಿಂಗ್ಸ್ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. ನಾಯಕ ದೋನಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಏಕೆಂದರೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ನಿರಾಸೆ ಅನುಭವಿಸಿದ್ದ ಕಾರಣ ನಾಯಕತ್ವದಲ್ಲಿ ಬದಲಾವಣೆ ತರಬೇಕು ಎಂಬ ಕೂಗು ಎದ್ದಿದೆ. ಆದ್ದರಿಂದ ಸೂಪರ್ ಕಿಂಗ್ಸ್ ತಂಡವನ್ನು ಟ್ರೋಫಿಯತ್ತ ಮುನ್ನಡೆಸಿ ನಾಯಕತ್ವದ ಶಕ್ತಿ ಕುಗ್ಗಿಲ್ಲ ಎಂಬುದನ್ನು ತೋರಿಸಿಕೊಡುವ ಸವಾಲು ಅವರ ಮುಂದಿದೆ.ದೋನಿ ಅಲ್ಲದೆ. ಮೈಕ್ ಹಸ್ಸಿ ಮತ್ತು ಸುರೇಶ್ ರೈನಾ ಈ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ನೀಡಲಿದ್ದಾರೆ. ಫಾಫ್ ಡು ಪ್ಲೆಸಿಸ್ ಮತ್ತು ಅಲ್ಬಿ ಮಾರ್ಕೆಲ್ ಅವರ ಸಾನಿಧ್ಯವೂ ತಂಡಕ್ಕೆ ನೆರವಾಗಲಿದೆ. ಏಕೆಂದರೆ ದಕ್ಷಿಣ ಆಫ್ರಿಕಾದವರೇ ಆದ ಇವರಿಗೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಶ್ನೆಯೇ ಎದುರಾಗದು.  ಪಂದ್ಯದಆರಂಭ: ಸಂಜೆ 5.00ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry