ಬುಧವಾರ, ನವೆಂಬರ್ 20, 2019
20 °C
ಮುಂದುವರಿದ ಡೇರ್‌ಡೆವಿಲ್ಸ್ ಸೋಲಿನ ಯಾತ್ರೆ; ಮಿಂಚಿದ ಹಸ್ಸಿ

ಸೂಪರ್ ಕಿಂಗ್ಸ್‌ಗೆ ಸುಲಭ ಜಯ

Published:
Updated:
ಸೂಪರ್ ಕಿಂಗ್ಸ್‌ಗೆ ಸುಲಭ ಜಯ

ನವದೆಹಲಿ (ಪಿಟಿಐ): ಮೊದಲ ಗೆಲುವಿಗಾಗಿ ಪರದಾಡುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಮುಖಭಂಗ ಅನುಭವಿಸಿದೆ. ಈ ತಂಡ ಗುರುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 86 ರನ್‌ಗಳಿಂದ ಸೋಲು ಕಂಡಿತು.ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಈ ಸವಾಲಿನ ಗುರಿ ಬೆನ್ನಟ್ಟುವ ಆರಂಭದಲ್ಲಿಯೇ ಡೇರ್‌ಡೆವಿಲ್ಸ್ ಆಘಾತ ಅನುಭವಿಸಿತು. ಈ ಆಘಾತದಿಂದ ಚೇತರಿಸಿಕೊಳ್ಳಲು ಡೆವಿಲ್ಸ್‌ಗೆ ಸಾಧ್ಯವಾಗಲೇ ಇಲ್ಲ.  ಡೆವಿಲ್ಸ್ 17.3 ಓವರ್‌ಗಳಲ್ಲಿ 83 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಸೂಪರ್ ಕಿಂಗ್ಸ್ ಬಳಗಕ್ಕೆ ಉತ್ತಮ ಆರಂಭ ಲಭಿಸಿತು. ಮೈಕ್ ಹಸ್ಸಿ (ಔಟಾಗದೆ 65, 50ಎಸೆತ, 6ಬೌಂಡರಿ, 2 ಸಿಕ್ಸರ್), ಸುರೇಶ್ ರೈನಾ (30, 32ಎಸೆತ, 5ಬೌಂಡರಿ) ಗಳಿಸಿದರು. ನಾಯಕ ಮಹೇಂದ್ರ ಸಿಂಗ್ ದೋನಿ 23ಎಸೆತಗಳಲ್ಲಿ 44 ರನ್ ಗಳಿಸಿದರು. ಡೆವಿಲ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಮೋಹಿತ್ ಶರ್ಮ (10ಕ್ಕೆ3). ಆರ್. ಅಶ್ವಿನ್ (18ಕ್ಕೆ2) ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರತಿಕ್ರಿಯಿಸಿ (+)