ಗುರುವಾರ , ಮಾರ್ಚ್ 4, 2021
20 °C

ಸೂಪರ್ ಕಿಂಗ್ಸ್ ನೆರವಿಗೆ ರೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಪರ್ ಕಿಂಗ್ಸ್ ನೆರವಿಗೆ ರೈನಾ

ಚೆನ್ನೈ (ಪಿಟಿಐ): ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ (44) ಹಾಗೂ ಮಹೇಂದ್ರ ಸಿಂಗ್ ದೋನಿ (ಔಟಾಗದೆ 34) ನೆರವಾದರು. ಇದರಿಂದ ದೋನಿ ಪಡೆ ಐಪಿಎಲ್ ಟೂರ್ನಿಯ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 139 ರನ್ ಕಲೆ ಹಾಕಿದೆ.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ಆರಂಭಿಕ ಆಘಾತ ಅನುಭವಿಸಿತು. ಫಾಫ್ ಡು ಪ್ಲೆಸಿಸ್ (3) ಅವರಿಗೆ ಬ್ರೆಟ್ ಲೀ ಆರಂಭದಲ್ಲಿಯೇ ಶಾಕ್ ನೀಡಿದರು. ಮೂರನೇ ವಿಕೆಟ್‌ಗೆ ಜೊತೆಯಾದ ರೈನಾ ಹಾಗೂ ಡ್ವೇನ್ ಬ್ರಾವೊ ಜೋಡಿ ಕೇವಲ 31 ಎಸೆತಗಳಲ್ಲಿ 42 ರನ್‌ಗಳನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನು ಹತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಮೂರು ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿತ್ತು.34 ಎಸೆತಗಳನ್ನು ಎದುರಿಸಿದ ಎಡಗೈ ಬ್ಯಾಟ್ಸ್‌ಮನ್ ರೈನಾ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಕೊನೆಯಲ್ಲಿ ವೇಗವಾಗಿ ರನ್ ಗಳಿಸಿದ ನಾಯಕ ದೋನಿ ಸಹ ತಂಡದ ಮೊತ್ತವನ್ನು ಹೆಚ್ಚಿಸಿದರು.ನೈಟ್ ರೈಡರ್ಸ್ ತಂಡದ ಜಾಕ್ ಕಾಲೀಸ್ ಎದುರಾಳಿ ತಂಡ ಹೆಚ್ಚು ರನ್ ಗಳಿಸದಂತೆ ತಡೆಯುವಲ್ಲಿ ಕೊಂಚ ಯಶಸ್ಸಿಯಾದರು. ಅವರು ನಾಲ್ಕು ಓವರ್‌ಗಳಲ್ಲಿ 20 ರನ್ ಮಾತ್ರ ಬಿಟ್ಟುಕೊಟ್ಟು ಪ್ರಮುಖ ಎರಡು ವಿಕೆಟ್ ಕಬಳಿಸಿದರು. ಬ್ರೆಟ್ ಲೀ (34ಕ್ಕೆ1) ಹಾಗೂ ಸುನಿಲ್ ನರೇನ್ (24ಕ್ಕೆ1) ಸಹ ನೆರವಾದರು.

ಸ್ಕೋರ್ ವಿವರ:

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 139

ಫಾಪ್ ಡು ಪ್ಲೆಸಿಸ್ ಸಿ ಮೆಕ್ಲಮ್ ಬಿ ಬ್ರೆಟ್ ಲೀ  03

ಮೈಕ್ ಹಸ್ಸಿ ರನ್‌ಔಟ್ (ಬ್ರೆಟ್ ಲೀ/ಮೆಕ್ಲಮ್)  18

ಸುರೇಶ್ ರೈನಾ ಸಿ ಯೂಸುಫ್ ಪಠಾಣ್ ಬಿ  ಕಾಲೀಸ್  44

ಡ್ವೇನ್ ಬ್ರಾವೊ ಸಿ ಇಕ್ಬಾಲ್ ಅಬ್ದುಲ್ಲಾ ಬಿ ಕಾಲೀಸ್  12

ಮಹೇಂದ್ರ ಸಿಂಗ್ ದೋನಿ ಔಟಾಗದೆ  34

ರವೀಂದ್ರ ಜಡೇಜ ಸಿ ದಾಸ್ ಬಿ ಸುನಿಲ್ ನರೇನ್  09

ಅಲ್ಬಿ ಮಾರ್ಕೆಲ್ ಔಟಾಗದೆ  13

ಇತರೆ: (ಬೈ-1, ಲೆಗ್ ಬೈ-2, ವೈಡ್-3)  06

ವಿಕೆಟ್ ಪತನ: 1-5 (ಪ್ಲೆಸಿಸ್; 1.4), 2-32 (ಹಸ್ಸಿ; 4.6), 3-74 (ಬ್ರಾವೊ; 10.1), 4-88 (ರೈನಾ; 12.6), 5-118 (ಜಡೇಜ; 17.6).

ಬೌಲಿಂಗ್: ಇಕ್ಬಾಲ್ ಅಬ್ದುಲ್ಲಾ 3-0-18-0, ಬ್ರೆಟ್ ಲೀ 4-0-34-1, ಯೂಸುಫ್ ಪಠಾಣ್ 1-0-10-0, ಸುನಿಲ್ ನರೇನ್ 4-0-24-1, ಜಾಕ್ ಕಾಲೀಸ್ 4-0-21-2, ರಜತ್ ಭಾಟಿಯಾ 3-0-22-0, ಲಕ್ಷ್ಮೀ ರತನ್ ಶುಕ್ಲಾ 1-0-7-0.

ವಿವರ ಅಪೂರ್ಣ

 
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.