ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

ಶನಿವಾರ, ಮೇ 25, 2019
22 °C

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

Published:
Updated:
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೇಂದ್ರ ಸಚಿವ ಗುಲಾಂನಬಿ ಆಜಾದ್ ಉದ್ಘಾಟನೆ ಮಾಡಿದರು.ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ನೆಲಮಹಡಿಯೊಂದಿಗೆ 5 ಅಂತಸ್ತುಗಳಿವೆ. 203 ಹಾಸಿಗೆಗಳನ್ನು ಹೊಂದುವ ಸಾಮರ್ಥ್ಯವನ್ನು ಪಡೆದಿದೆ. ಒಂದೇ ಕಟ್ಟಡದಲ್ಲಿ ಆರು ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಒಳಗೊಂಡಿದೆ. ಸಂಗೀತ ಚಿಕಿತ್ಸಾ ಕೇಂದ್ರ: ಹೆರಿಗೆಗೂ ಮುನ್ನ ಮತ್ತು ಹೆರಿಗೆ ಸಮಯದಲ್ಲಿ ಇರುವ ನೋವು  ಮತ್ತು ಉದ್ರೇಕವನ್ನು ಸಮರ್ಪಕವಾಗಿ ನಿರ್ವಹಿಸಲು ಸಂಗೀತ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಸಂಗೀತ ಚಿಕಿತ್ಸೆಯಿಂದ ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯ ಮಾನಸಿಕ ಏರಿಳಿತವನ್ನು ನಿಯಂತ್ರಿಸಬಹುದು. ಇದರಿಂದ ಯಾವುದೇ ತೊಂದರೆಯಿಲ್ಲದೇ ಹೆರಿಗೆಯಾಗುತ್ತದೆ. ಈ ಚಿಕಿತ್ಸೆಯು ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.ರೇಡಿಯೋ ಡಯಾಗ್ನೋಸಿಸ್ ವಿಭಾಗದಲ್ಲಿ ನೂತನ ಡಿಜಿಟಲ್ ರೇಡಿಯೋಗ್ರಫಿ ಉಪಕರಣವನ್ನು ಆಳವಡಿಸಲಾಗಿದೆ. ಈ ಉಪಕರಣವು ಕ್ಷ-ಕಿರಣ ಛಾಯಾಚಿತ್ರದ ರೂಪದಲ್ಲಿದ್ದು, ಡಿಜಿಟಲ್ ಆಗಿರುವುದರಿಂದ ಕಡಿಮೆ ಅವಧಿ ಮತ್ತು ವೆಚ್ಚದಲ್ಲಿ ಛಾಯಾಚಿತ್ರಗಳನ್ನು ತೋರಿಸುವ ಸಾಮರ್ಥ್ಯವನ್ನು ಹೊಂದಿದೆ.ಪುಡ್ ಕೋರ್ಟ್: ವಾಣಿ ವಿಲಾಸ ಆಸ್ಪತ್ರೆಯ ಆವರಣದಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸಾಮಾನ್ಯ ದರಗಳಲ್ಲಿ ಒದಗಿಸುವ ದೃಷ್ಟಿಯಿಂದ ಫುಡ್‌ಕೋರ್ಟ್ ಸ್ಥಾಪಿಸಲಾಗಿದೆ.   ಆಹಾರದ ಗುಣಮಟ್ಟದ ನಿರ್ವಹಣೆಗಾಗಿ ಒಂದು ಸಮಿತಿಯನ್ನು ರಚಿಸಲಾಗಿದ್ದು, ಗುಣಮಟ್ಟವನ್ನು ಪರಿಶೀಲಿಸಿ ಸಮಿತಿ ವರದಿ ನೀಡುತ್ತದೆ. 100ಕ್ಕಿಂತಲೂ ಹೆಚ್ಚು ಮಂದಿ ಈ ಫುಡ್‌ಕೋರ್ಟ್‌ನಲ್ಲಿ ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry