ಮಂಗಳವಾರ, ಅಕ್ಟೋಬರ್ 15, 2019
28 °C

ಸೂಪರ್ 30 ಖ್ಯಾತಿಯ ಆನಂದ ಕುಮಾರ್ ಕಮ್ಮಟ

Published:
Updated:

`ಸೂ ಪರ್ 30~ ಖ್ಯಾತಿಯ ಆನಂದ ಕುಮಾರ್  ಅವರು ಬೆಂಗಳೂರಿನಲ್ಲಿ ಜನವರಿ 7 ಮತ್ತು 8ರಂದು ಗಣಿತ ಕಮ್ಮಟವನ್ನು ನಡೆಸಿಕೊಡಲಿದ್ದಾರೆ.ಐಐಟಿ - ಜೆಇಇ  ಯಂತಹ ಅಖಿಲ ಭಾರತ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ 9, 10 ಹಾಗೂ 11 ಮತ್ತು ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಕಮ್ಮಟ ನಡೆಯಲಿದೆ. ಬಿಷಪ್ ಕಾಟನ್ ಬಾಯ್ಸ ಹೈಸ್ಕೂಲ್ ಮತ್ತು  ಏಸ್ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಗಳ ಸಹಯೋಗದಲ್ಲಿ  ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿ ಈ ಕಮ್ಮಟವನ್ನು ಏರ್ಪಡಿಸುತ್ತಿದೆ. ಕಮ್ಮಟ ನಡೆಯುವ ಈ ಎರಡೂ ದಿನಗಳಲ್ಲಿ ಆನಂದ ಕುಮಾರ್ ಅವರು ಐಐಟಿ, ಜೆಇಇ ಮತ್ತಿತರ ಅಖಿಲ ಭಾರತ ಪ್ರವೇಶ ಪರೀಕ್ಷೆಗಳ ಗಣಿತ ಪ್ರಶ್ನೆಗಳನ್ನು ಪರಿಹರಿಸುವ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವರು.  ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಬಗೆ ಕುರಿತು ಏಸ್ ಕ್ರಿಯೇಟಿವ್ ಲರ್ನಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಡಾ ಶ್ರೀಧರ್ ಅವರು ಮಾರ್ಗದರ್ಶನ ಮಾಡುವರು. ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಕಮ್ಮಟ ಉದ್ಘಾಟಿಸುವರು.ಈ ಕಮ್ಮಟಕ್ಕೆ ಪ್ರವೇಶ ಉಚಿತ.  ಮೊದಲು ಬಂದವರಿಗೆ ಮೊದಲ ಆದ್ಯತೆ  ಎಂಬ ಸೂತ್ರದ ಅನುಸಾರ ಆಸನ ವ್ಯವಸ್ಥೆ ಇರುತ್ತದೆ. ಕಮ್ಮಟ ನಡೆಯುವ ವೇಳೆ: ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ. ಕಮ್ಮಟ ನಡೆಯುವ ಸ್ಥಳ:  ಬಿಷಪ್ ಕಾಟನ್ಸ್ ಬಾಯ್ಸ ಹೈಸ್ಕೂಲ್ ಆಡಿಟೋರಿಯಂ, ರೆಸಿಡೆನ್ಸಿ ರಸ್ತೆ (ಕ್ಯಾಷ್ ಫಾರ್ಮಸಿ ಬಳಿ), ಬೆಂಗಳೂರು.

 ನೊಂದಾವಣೆಗಾಗಿ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ: 080-25880202, 25880216, 25880225, 25880226 ಅಥವಾ  ನರೇಂದ್ರ 09343369074/ಜೋಯಿಸ್ 09845553848.

ಇ-ಮೇಲ್: dhpvmathsworkshop@deccanherald.co.in

ಸೂಪರ್ 30

`ರಾಮಾನುಜನ್ ಸ್ಕೂಲ್ ಆಫ್ ಮ್ಯಾಥೆಮ್ಯಾಟಿಕ್ಸ್~  ಸಂಸ್ಥೆಯಡಿ ಬಿಹಾರದ ಪಟ್ನಾದಲ್ಲಿ 2002ರಲ್ಲಿ  ಆನಂದ್ ಕುಮಾರ್ ಅವರು ಆರಂಭಿಸಿದ ಶೈಕ್ಷಣಿಕ ಕಾರ್ಯಕ್ರಮದ ಹೆಸರು `ಸೂಪರ್ 30~.  ಈ ಕಾರ್ಯಕ್ರಮದಡಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ  30 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು  ಐಐಟಿ- ಜೆಇಇ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.ಆರಂಭದ ವರ್ಷದಲ್ಲಿ 30 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಯಶಸ್ವಿಯಾಗಿದ್ದರು.  ನಂತರ 2008ರಿಂದ 2010ರವರೆಗೆ ನಿರಂತರವಾಗಿ ಮೂರು ವರ್ಷಗಳ ಕಾಲ 30 ವಿದ್ಯಾರ್ಥಿಗಳ ಪೈಕಿ 30 ಮಂದಿಯೂ ಯಶ ಸಾಧಿಸಿ ಐಐಟಿಗಳಿಗೆ ಪ್ರವೇಶ ಪಡೆದಿದ್ದರು. 2011ರಲ್ಲಿ  30 ವಿದ್ಯಾರ್ಥಿಗಳ ಪೈಕಿ 24  ವಿದ್ಯಾರ್ಥಿಗಳು ಐಐಟಿ ಗೆ ಗಳಿಗೆ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದಾರೆ.ಆನಂದ ಕುಮಾರ್ ಅವರ ಈ ವಿಶಿಷ್ಟ ತರಬೇತಿ ಕಾರ್ಯಕ್ರಮಗಳಿಗೆ ವಿಶ್ವ ಮಾನ್ಯತೆ ದಕ್ಕಿದೆ. ಟೈಮ್ ಮ್ಯಾಗಜೀನ್  ಪ್ರಕಟಿಸಿದ್ದ `ಬೆಸ್ಟ್ ಆಫ್ ಏಷ್ಯಾ~ (ಏಷ್ಯಾದ ಅತ್ಯುತ್ತಮಗಳ ಪಟ್ಟಿ)  2010ರ ಪಟ್ಟಿಯಲ್ಲಿ  ಆನಂದ ಕುಮಾರ್ ಅವರ  `ಸೂಪರ್ 30~ ತರಬೇತಿ ಶಾಲೆ ಸ್ಥಾನ ಗಿಟ್ಟಿಸಿಕೊಂಡಿತ್ತು.

Post Comments (+)