ಗುರುವಾರ , ಜೂನ್ 24, 2021
25 °C

ಸೂಫಿ ಪಂಥದ ಶ್ರೀಮಂತ ಪರಂಪರೆ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಾಕಿಸ್ತಾನದ ಹೆಸ­ರಾಂತ ಸೂಫಿ ಗಾಯಕರು ಭಾರತದ ತಮ್ಮ ಸಹವರ್ತಿ­ಗಳ ಸಂಯೋಗದಲ್ಲಿ ಸೂಫಿ­­­ಪಂಥದ ಶ್ರೀಮಂತ ಸಂಸ್ಕೃತಿಯನ್ನು ಅನಾ­ವರಣ­ಗೊ­ಳಿ­ಸಿದ ಭಾವ­ಪೂರ್ಣ ಪ್ರದ­­ರ್ಶನಕ್ಕೆ ಇಲ್ಲಿ ನಡೆದ ಸಿಂಧಿಸೂಫಿ ಉತ್ಸವ ಸಾಕ್ಷಿ­ಯಾಯಿತು.ಮಾರ್ಚ್‌ 22ರಂದು ಪ್ರಾರಂಭ­ವಾದ ಎರಡು ದಿನದ ಈ ಉತ್ಸವವನ್ನು ದೆಹಲಿ ಸರ್ಕಾರದ ಆಶ್ರಯದಲ್ಲಿ ಸಿಂಧಿ ಅಕಾಡೆಮಿ ಆಯೋಜಿಸಿತ್ತು.

‘ಪಾಕಿಸ್ತಾನ ಮತ್ತು ಭಾರತದ ಸೂಫಿ ಗಾಯಕರನ್ನು ಒಟ್ಟಿಗೆ ತರುವುದರ ಮೂಲಕ ನಶಿಸುತ್ತಿರುವ ಸಿಂಧಿ ಭಾಷೆ­ಯನ್ನು ಜೀವಂತವಾಗಿಡು­ವುದು ಈ ಉತ್ಸ­ವದ ಉದ್ದೇಶವಾಗಿದೆ’ ಎಂದು ಸಂಘ­ಟ­ಕರು ತಿಳಿಸಿದ್ದಾರೆ.‘ಸೂಫಿಪಂಥವು ಸಂಗೀತದ ಒಂದು ಪ್ರಕಾ­ರ­­ವಾಗಿದೆ. ಭಾರತದಲ್ಲಿ ಸೂಫಿ­ಪಂಥದ ಬಹಳ ಶ್ರೀಮಂತ ಪರಂಪರೆ­ಯಿದೆ. ನಾನು ಎರಡನೇ ಬಾರಿ ಈ ಉತ್ಸವಕ್ಕೆ ಬರುತ್ತಿದ್ದೇನೆ. ಇದೊಂದು ಅದ್ಭುತ ಅನುಭವ’ ಎಂದು ಪಾಕಿಸ್ತಾನದ ಸೂಫಿ ಗಾಯಕ ತುಫೈಲ್‌ ಸಂಜ್ರಾನಿ ಹೇಳಿದ್ದಾರೆ.‘ದ್ವಿಪಕ್ಷೀಯ ಸಂಬಂಧಗಳನ್ನು ಸುಧಾ­ರಿ­­ಸುವ ಇಂತಹ ಪ್ರಯತ್ನಗಳು ಇನ್ನಷ್ಟು ಆಗಬೇಕು. ಸಂಗೀತಕ್ಕೆ ಭಾಷೆಯಿಲ್ಲ. ಗಡಿಯಿಲ್ಲ. ಅದು ಎಲ್ಲವನ್ನೂ ಎಲ್ಲರನ್ನೂ ಒಗ್ಗೂಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.‘ಸಿಂಧ್‌ಸೂಫಿ ಪಂಥದ ಜನ್ಮಭೂಮಿ­ಯಾಗಿದೆ. ಸೂಫಿಪಂಥ ಮತ್ತು ಸಿಂಧಿ ಭಾಷೆಯ ಪರಂಪರೆಯನ್ನು ಹಂಚಿ­ಕೊಳ್ಳು­ವುದು ಭಾರತ, ಪಾಕಿಸ್ತಾನವನ್ನು ಒಗ್ಗೂಡಿಸುವ ಮಾರ್ಗಗಳಲ್ಲೊಂದಾ­ಗಿದೆ.’ ಎಂದು ಸಿಂಧಿ ಅಕಾಡೆಮಿ ಕಾರ್ಯ­ದರ್ಶಿ ಸಿಂಧು ಮಿಶ್ರಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.