ಸೂರಜ್‌ ನೂತನ ದಾಖಲೆ

7

ಸೂರಜ್‌ ನೂತನ ದಾಖಲೆ

Published:
Updated:

ಬೆಂಗಳೂರು: ಅಲ್‌ ಅಮೀನ್‌ ಕಾಲೇಜ್‌ನ ಸೂರಜ್‌ ಮಂಡಲ್‌ ಅವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಪುರುಷರ ಲಾಂಗ್‌ಜಂಪ್‌ನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರು.ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಈ ಸ್ಪರ್ಧೆಯಲ್ಲಿ ಅವರು 7.11 ಮೀಟರ್‌ ದೂರ ಜಿಗಿದರು. ಈ ಮೂಲಕ 2009ರಲ್ಲಿ ಅಲ್‌ ಅಮೀನ್‌ ಕಾಲೇಜ್‌ನವರೇ ಆದ ಅರ್ಷದ್‌ ನಿರ್ಮಿಸಿದ್ದ ದಾಖಲೆಯನ್ನು (7.6 ಮೀ.) ಅಳಿಸಿ ಹಾಕಿದರು. ಸೇಂಟ್‌ ಜೋಸೆಫ್ಸ್‌ ಆರ್ಟ್ಸ್‌ ಆ್ಯಂಡ್‌ ಸೈನ್ಸ್‌ ಕಾಲೇಜ್‌ನ ವಗರ್ತ್‌ ಗೌರವ್‌ (6.98 ಮೀ.) ಹಾಗೂ ಶೇಷಾದ್ರಿಪುರಂನ ಕೆ.ಎಸ್‌.ಟೌನ್‌ನ ಸಿ.ಮುನಿರಾಜ್‌ (6.89 ಮೀ.) ನಂತರದ ಸ್ಥಾನ ಪಡೆದರು.110 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಕೆ.ಆರ್‌.ಪುರಂನ ಪ್ರಥಮ ದರ್ಜೆ ಕಾಲೇಜ್‌ನ ಬಿ.ಚೇತನ್‌ ಮೊದಲ ಸ್ಥಾನ ಗಳಿಸಿದರು. ಅವರು 15.8 ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿದರು. 400 ಮೀಟರ್ಸ್‌ನಲ್ಲಿ ಅಲ್‌ ಅಮೀನ್‌ ಕಾಲೇಜ್‌ ತಂಡದ ಕೆ.ಎಸ್‌.ಜೀವನ್‌ (48.8 ಸೆ.) ಅಗ್ರಸ್ಥಾನ ಪಡೆದರು. ಎಂ.ಇ.ಎಸ್‌.ಡಿಗ್ರಿ ಕಾಲೇಜ್‌ನ ಡಿ.ಆರ್‌.ರಾಹುಲ್‌ ಹಾಗೂ ಕೋಲಾರದ ಶ್ರೀ ಗೋಕುಲ ಕಾಲೇಜ್‌ನ ಆರ್‌.ಕಿಶೋರ್‌ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು.ಮಹಿಳೆಯರ ವಿಭಾಗದ 400 ಮೀ. ಓಟದಲ್ಲಿಸುರಾನ ಕಾಲೇಜ್‌ನ ಎಂ.ಅರ್ಪಿತಾ (58.2 ಸೆ.) ಮೊದಲ ಸ್ಥಾನ ಪಡೆದರು. 100 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಸೇಂಟ್‌ ಜೋಸೆಫ್ಸ್‌ ಕಾಮರ್ಸ್‌ ಕಾಲೇಜ್‌ನ ಮೇಘನಾ ಶೆಟ್ಟಿ ಪ್ರಥಮ ಸ್ಥಾನ ಗಳಿಸಿದರು. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮೌಂಟ್‌ ಕಾರ್ಮೆಲ್‌ ಕಾಲೇಜ್‌ನ ಗ್ರೀಷ್ಮಾ ಮೊದಲ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry