ಶನಿವಾರ, ನವೆಂಬರ್ 23, 2019
17 °C

ಸೂರಿಲ್ಲದ ಮತದಾರರ ಪಟ್ಟಿಗೆ ಕೇವಲ 61 ಅರ್ಜಿ!

Published:
Updated:

ಬೆಂಗಳೂರು: ಸೂರಿಲ್ಲದವರಿಗೂ ಮತದಾನದ ಗುರುತಿನ ಚೀಟಿ ನೀಡಲು ರಾಜ್ಯ ಚುನಾವಣಾ ಆಯೋಗ ಮುಂದಾದರೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಂದಿರುವ ಅರ್ಜಿಗಳು ಕೇವಲ 61 ಮಾತ್ರ.ಸೂರಿಲ್ಲದವರಿಗೂ ಮತದಾನದ ಹಕ್ಕು ದೊರೆಯಬೇಕು ಎಂದು ಹಲವು ಸ್ವಯಂಸೇವಾ ಸಂಸ್ಥೆಗಳು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಅಭಿಯಾನದಲ್ಲಿ ಸೂರಿಲ್ಲದವರನ್ನೂ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಬೇಕು ಎಂದು ಬಿಬಿಎಂಪಿ ಹೆಚ್ಚುವರಿ ಚುನಾವಣಾಧಿಕಾರಿ ಆರ್.ವಿಶಾಲ್ ಅಧಿಕಾರಿಗಳಿಗೆ ತಿಳಿಸಿದ್ದರು.ಆದರೆ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಂತಿಮ ದಿನವಾದ ಭಾನುವಾರದವರೆಗೆ (ಏ.7) ಬಂದಿರುವ ಅರ್ಜಿಗಳು 61 ಮಾತ್ರ. ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಿ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳುವಂತೆ ಹಾಗೂ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಆರ್. ವಿಶಾಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.`ಬೆಂಗಳೂರು ಪೂರ್ವ ವಿಭಾಗದಿಂದಲೇ 61 ಅರ್ಜಿಗಳು ಬಂದಿವೆ. ಮನೆಯಿಲ್ಲದವರು ಸಹ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು. ಆದರೆ, ಈ ಬಗ್ಗೆ ಜಾಗೃತಿ ಮೂಡಿಸುವುದು ಕಷ್ಟ' ಎಂದು ಅವರು ಹೇಳಿದರು.`ಬಿಬಿಎಂಪಿ ಈ ಅರ್ಜಿಗಳನ್ನು ಉಪೇಕ್ಷಿಸದೇ ಸೂಕ್ತ ಸಂದರ್ಭದೊಳಗೆ ಮತದಾನದ ಗುರುತಿನ ಚೀಟಿಯನ್ನು ನೀಡಬೇಕು' ಎಂದು ಇಂಡೋ ಗ್ಲೋಬಲ್ ಸೋಶಿಯಲ್ ಸರ್ವೀಸ್ ಸೊಸೈಟಿ (ಐಜಿಎಸ್‌ಎಸ್‌ಎಸ್) ಸದಸ್ಯೆ ಜ್ಯೋತಿ ಗುಪ್ತಾ ಒತ್ತಾಯಿಸಿದ್ದಾರೆ

ಪ್ರತಿಕ್ರಿಯಿಸಿ (+)