ಶುಕ್ರವಾರ, ಮೇ 14, 2021
21 °C

ಸೂರ್ಯಕಾಂತಿಗೆ ಹೂಜಿಕಾಟ ವಿಜ್ಞಾನಿಗಳ ತಂಡದಿಂದ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: ತಾಲ್ಲೂಕಿನ ಹಂಪಸಂದ್ರ ಗ್ರಾಮದ ರೈತ ಬೆಣ್ಣೆಪರ್ತಿ ನಾರಾಯಣಪ್ಪ ಅವರಿಗೆ ಸೇರಿದ ಹೊಲದಲ್ಲಿ ಸೊಂಪಾಗಿ ಬೆಳೆದು ನಿಂತಿದ್ದ ಸೂರ್ಯಕಾಂತಿ ಹೂಗಳು ಕಾಂಡದಿಂದ ಬೇರ್ಪಟ್ಟು ಉದುರಿ ಹೋಗುತ್ತಿರುವ ವಿಚಿತ್ರ ರೋಗಕ್ಕೆ ಹೂಜಿ ಕಾಟವೇ ಕಾರಣ ಎಂದು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ  ಕೃಷಿ ಅಧಿಕಾರಿಗಳ ಹಾಗೂ ಕೃಷಿ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ.ಸೂರ್ಯಕಾಂತಿ ತೆನೆ ಹಿಂಭಾಗ ಹೂಜಿ ಕೀಟ ಕೊರೆದು ಮೊಟ್ಟೆ ಯಿಟ್ಟಿದೆ. ಇದರಿಂದ ಉತ್ಪತ್ತಿಯಾಗಿ ರುವ ಅಂಟು ದ್ರವಕ್ಕೆ ಇತರೆ ಹುಳು ಗಳು ದಾಳಿ ಮಾಡುತ್ತಿರುವ ಕಾರಣ ಹೂಗಳು ಇದ್ದಕ್ಕಿದ್ದಂತೆ ನೆಲ ಕಚ್ಚುತ್ತಿರುವು ದಾಗಿ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಹೀರ್‌ಖಾನ್ ತಿಳಿಸಿದರು.ಈಗಾಗಲೇ ಹೊಲದಲ್ಲಿ ಶೇ 30ರಷ್ಟು ಬೆಳೆ ರೋಗಕ್ಕೆ ತುತ್ತಾಗಿದೆ. ಕೀಟೋಪಚಾರ ನಡೆಸಲು ಔಷಧಿ ಸಿಂಪಡಿಸಿದರೆ ಪಾಲಿನೇಷನ್ ಪ್ರಕ್ರಿಯೆಗೆ ತೊಂದರೆಯಾಗಿ ಇಡೀ ಬೆಳೆ ನಷ್ಟವಾಗುತ್ತದೆ. ಬದಲಿಗೆ ಪ್ರೊಫನೋಫಾಸ್ ಸಿಂಪಡಿಸಿ ಬದುಗಳಿಗೆ ಮೀಥೈಲ್ ಪ್ಯಾರಾಥೇನ್ ಪುಡಿ ಉಪಯೋಗಿಸಬೇಕು ಎಂದು ಅವರು ಸಲಹೆ ನೀಡಿದರು.ಸೂರ್ಯಕಾಂತಿ ಬೆಳೆಯಿಂದ ಆಗುತ್ತಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನರಸರಾಜು ತಿಳಿಸಿದರು. ಚಿಕ್ಕಬಳ್ಳಾಪುರ ತಾಲ್ಲೂಕು ಕೃಷಿ ಅಧಿಕಾರಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.