ಮಂಗಳವಾರ, ಮೇ 11, 2021
25 °C

ಸೂರ್ಯನಗರಿಗೆ ವರುಣನ ಸಿಂಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರ್ಯನಗರಿಗೆ ವರುಣನ ಸಿಂಚನ

ಗುಲ್ಬರ್ಗ: ಬೇಸಿಗೆ ಧಗೆಗೆ ಸಿಲುಕಿದ್ದ ಸೂರ್ಯನಗರಿಗೆ ಬುಧವಾರ ಸಂಜೆ ವರುಣ ಪ್ರವೇಶಿಸಿದ. ಬಿರುಬೇಸಿಗೆಗೆ ಹೈರಾಣಾಗಿದ್ದ ಜನತೆ ದಿಢೀರ್ ಬದಲಾದ ವಾತಾವರಣದಿಂದ ಉಲ್ಲಸಿತರಾದರು.ನಿನ್ನೆಯವರೆಗೆ ಬೇಸಿಗೆ ಧಗೆ ಹೆಚ್ಚಾಗಿತ್ತು. ಆದರೆ ಇಂದು ಮಧ್ಯಾಹ್ನದಿಂದ ಮೋಡಗಳು ದಟ್ಟೈಸಿ, ಬಿಸಿಲ ಝಳ ತುಸು ಕಡಿಮೆಯಾಯಿತು. ಬದಲಾದ ವಾತಾವರಣ ಗಮನಿಸಿದ ನಗರದ ನಿವಾಸಿಗಳು ಅಚ್ಚರಿಪಡುವಂತೆ, ಸಂಜೆ ಪ್ರಬಲ ಗಾಳಿ ಬೀಸುವಿಕೆ ಆರಂಭವಾಯಿತು. ಜತೆ-ಜತೆಗೇ ಧೂಳು, ಕಸ-ಕಡ್ಡಿಯೂ ಎಲ್ಲೆಡೆ ಆವರಿಸಿತು.ನಗರದ ಜೇವರ್ಗಿ ಕ್ರಾಸ್‌ನಿಂದ ನೋಬಲ್ ಸ್ಕೂಲ್‌ವರೆಗೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇಡೀ ರಸ್ತೆ ಧೂಳಿನಿಂದ ಆವೃತವಾಯಿತು. ವಾಹನ ಸವಾರರು ದಿಕ್ಕುತೋಚದೇ ಕೆಲ ನಿಮಿಷ ರಸ್ತೆ ಪಕ್ಕ ನಿಲ್ಲಬೇಕಾದ ಅನಿವಾರ್ಯತೆಯೂ ಉಂಟಾಯಿತು. ಸಂಜೆ 7 ಗಂಟೆ ಸುಮಾರಿಗೆ ಒಂದೆರಡು ಹನಿಗಳೊಂದಿಗೆ ವರುಣದೇವ ನಗರಕ್ಕೆ ಕಾಲಿಟ್ಟ. ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಕೆಲ ನಿಮಿಷ ಮಳೆಯಾದರೆ, ನಗರದ ವಿವಿಧ ಬಡಾವಣೆಗಳಲ್ಲೂ ಮಳೆಯ ಸಿಂಚನವಾಯಿತು. ಜಿಲ್ಲೆಯ ವಿವಿಧೆಡೆ ಸಿಡಿಲು- ಗುಡುಗು ಸಂಭವಿಸಿದ ವರದಿಗಳು ಬಂದಿವೆ.ಸಾಮಾನ್ಯವಾಗಿ ಏಪ್ರಿಲ್ ತಿಂಗಳ ನಂತರ ಬಿಸಿಲು ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ ತಿಂಗಳ ಆರಂಭದಲ್ಲೇ ಒಮ್ಮೆ ಕಾಣಿಸಿಕೊಂಡ ಮಳೆಯಿಂದಾಗಿ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.