ಸೂರ್ಯನ ಸಹಕಾರ

7

ಸೂರ್ಯನ ಸಹಕಾರ

Published:
Updated:
ಸೂರ್ಯನ ಸಹಕಾರ

ಸೌರಮಂಡಲದ ಒಡೆಯನು ಸೂರ‌್ಯನು

ಬಿಡುವಿಲ್ಲದೆ ದುಡಿಮೆಯ ಮಾಡಿಹನು

ಇರುಳೊಡನೆ ಹೋರಾಡಿ ಬೆಳಕನು ಹರಡಿ

ಬಣ್ಣದೋಕುಳಿಯಲಿ ಜಳಕವ ಮಾಡಿಹನು

ಪಯಣದ ಮೊದಲಲಿ ಮೂಡಣ ಮನೆಯಲಿ

ಸಡಗರದಿ ಬಿಡಿಸುವ ವಿಧ-ವಿಧ ಚಿತ್ತಾರ

ಚಿಲಿಪಿಲಿ ಕಲರವ ಗಿಡದಲಿ-ಮರದಲಿ

ಘಮ ಘಮ ಸುಮ ಅರಳಿವೆ ತರಾ-ತರ

ಅಡಗಿತ್ತು ಕನಸಿನ ಬೀಜ `ಹದ~ ಮಣ್ಣೊಳಗೆ

ಸವಿದಿತ್ತು ಎಳೆಕಿರಣದ ತನ್ನೊಳಗೆ

ದಿನಗಳು ಉರುಳಿ ಮೊಳಕೆಯು ಚಿಗುರಿ

ಕಾಳರಾಶಿ ತೂಗಿ ತೊನೆಯಿತು ತೆನೆಯೊಳಗೆ

ಅನ್ನದಾತನ ಮನದಿ ಮೂಡಿತು ನೆಮ್ಮದಿ

ಮರೆಯಾಯಿತು. ಹಸಿವಿನ ಬೇಗುದಿ

ಮಣ್ಣಿನ ಮಕ್ಕಳು ಮನದುಂಬಿ ನಕ್ಕರೆ

ದೇಶ ದಾಟುವುದು ಬಡತನದ ಗೆರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry