ಸೂರ್ಯಸಿಟಿಗೆ ಶಿಂಷಾದಿಂದ ನೀರು

6

ಸೂರ್ಯಸಿಟಿಗೆ ಶಿಂಷಾದಿಂದ ನೀರು

Published:
Updated:

ಆನೇಕಲ್: ತಾಲ್ಲೂಕಿನ ಸೂರ್ಯಸಿಟಿ ಎರಡನೇ ಹಂತಕ್ಕೆ ಶಿಂಷಾದಿಂದ ನೀರು ತರಲು 250ಕೋಟಿ ರೂ. ಯೋಜನೆ ಮಂಜೂರಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ನುಡಿದರು.ಅವರು ತಾಲ್ಲೂಕಿನ ಹಿನ್ನಕ್ಕಿ ಸಮೀಪದಲ್ಲಿ ಸೂರ್ಯಸಿಟಿ ಎರಡನೇ ಹಂತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಶಿಂಷಾದಿಂದ ಸೂರ್ಯಸಿಟಿಗೆ ನೀರು ತರುವ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಇದರಿಂದ ಈ ಭಾಗಕ್ಕೆ ಅನುಕೂಲವಾಗಲಿದೆ ಎಂದರು. ಸೂರ್ಯಸಿಟಿಯು ಅತ್ಯಂತ ವ್ಯವಸ್ಥಿವಾಗಿ ರೂಪುಗೊಂಡಿರುವ ಗೃಹ ಮಂಡಳಿಯ ಬಡಾವಣೆಯಾಗಿದೆ. ಇನ್ನೆರಡು ತಿಂಗಳಲ್ಲಿ ಶೇ.75ರಷ್ಟು ನಿವೇಶನಗಳನ್ನು ವಿತರಿಸಲಾಗುವುದು. 8000 ನಿವೇಶನಗಳ ಪೈಕಿ 5000 ಸಾವಿರ ನಿವೇಶನಗಳು ವಿತರಣೆಗೆ ಸಿದ್ಧವಾಗಿವೆ ಎಂದರು.ಸೂರ್ಯಸಿಟಿ ಮೂರನೇ ಹಂತವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಸೂರ್ಯಸಿಟಿ ಸಮೀಪದ ಗ್ರಾಮಗಳಾದ ತಾಲ್ಲೂಕಿನ ಮರಸೂರು, ನಾಗನಾಯಕನ ಹಳ್ಳಿ, ಲಿಂಗಾಪುರ, ಹಿನ್ನಕ್ಕಿ ಗ್ರಾಮಗಳಿಗೆ 50ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರು, ಒಳಚರಂಡಿ, ಶಾಲೆ, ರಸ್ತೆ ಸೇರಿದಂತೆ ಮೂಲಸೌಲಭ್ಯಗಳನ್ನು ಗೃಹಮಂಡಳಿ ವತಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.ಶಾಸಕ ಎಂ.ಕೃಷ್ಣಪ್ಪ ಅವರ ಮನವಿ ಮೇರೆಗೆ ಜಿಗಣಿಗೆ ಒಳಚರಂಡಿ ಸೌಲಭ್ಯಕ್ಕಾಗಿ 3ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು. ಚಂದಾಪುರ ಮುಖ್ಯ ರಸ್ತೆಯಿಂದ ರಾಮಕೃಷ್ಣಾಪುರ ಮುಖಾಂತರ ಸೂರ್ಯಸಿಟಿ 150ಅಡಿಗಳ ವಿಶಾಲ ರಸ್ತೆ ನಿರ್ಮಿಸುವುದಾಗಿ ತಿಳಿಸಿದರು.ಹೆನ್ನಾಗರ ಅಮಾನಿ ಕೆರೆಯ 180 ಎಕರೆ ಪ್ರದೇಶದಲ್ಲಿ 200ಕ್ಕೂ ಹೆಚ್ಚು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಯೋಜನೆಯ ವ್ಯಾಪ್ತಿಯಿಂದ ಕೈಬಿಡುವ ಬಗ್ಗೆ ಸಾಧ್ಯತೆಗಳನ್ನು ಪರಿಶೀಲಿಸಲು ಅಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ಸರ್ಕಾರದ ಭೂಸ್ವಾಧೀನದಿಂದ ಜಮೀನು ಕಳೆದುಕೊಂಡ ರೈತರು ಹಣ ಪಡೆಯಲು ಪರದಾಡುವ ಪರಿಸ್ಥಿತಿಗೆ ಮಂಗಳ ಹಾಡಬೇಕು ಎಂದು ಹೇಳಿದರು.ಸೂರ್ಯಸಿಟಿ ವಿಶಾಲ ಪ್ರದೇಶದಲ್ಲಿರುವುದರಿಂದ ಸಂಚಾರ ಒತ್ತಡ ಕಡಿಮೆ ಮಾಡಲು ಸೂರ್ಯಸಿಟಿಗೆ ಸಂಪರ್ಕ ಕಲ್ಪಿಸುವ ನಾಯನಹಳ್ಳಿ ಹಾರಗದ್ದೆ ರಸ್ತೆ, ನಾಗನಾಯಕನಹಳ್ಳಿ ಮರಸೂರು ರಸ್ತೆ ಸೇರಿದಂತೆ ಹಾಲಿ ಇರುವ ರಸ್ತೆಗಳನ್ನು ವಿಸ್ತರಿಸಿ ಗೃಹ ಮಂಡಳಿ ವತಿಯಿಂದ ಸಿದ್ಧಗೊಳಿಸಬೇಕು ಎಂದು ಸೂಚಿಸಿದರು. ಶಾಸಕ ಎಂ.ಕೃಷ್ಣಪ್ಪ, ಗೃಹ ಮಂಡಳಿ ಆಯುಕ್ತ ಜಯರಾಮ್, ಭೂಸ್ವಾಧೀನಾಧಿಕಾರಿ ರಾಜಮ್ಮಚೌಡರೆಡ್ಡಿ, ಮುಖ್ಯ ಎಂಜಿನಿಯರ್ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ನಾರಾಯಣಪ್ಪ, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್, ಮುಖಂಡರಾದ ಪ್ರಶಾಂತ್, ನಾಗನಾಯಕನಹಳ್ಳಿ ರಾಧಾಕೃಷ್ಣ, ಮರಸೂರು ಶ್ರೆನಿವಾಸ್ ರೆಡ್ಡಿ ಮತ್ತಿತರರು ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry