ಸೂರ್ಯ ಗ್ರಹಣ ಜನರಿಂದ ವೀಕ್ಷಣೆ

7

ಸೂರ್ಯ ಗ್ರಹಣ ಜನರಿಂದ ವೀಕ್ಷಣೆ

Published:
Updated:

ಬುಧವಾರ, 16-2-1961

ಸೂರ್ಯ ಗ್ರಹಣ ಜನರಿಂದ ವೀಕ್ಷಣೆ

ಪ್ಯಾರಿಸ್, ಫೆ. 15 -
ಇಂದು ಸಂಭವಿಸಿದ ಸೂರ್ಯ ಗ್ರಹಣವನ್ನು ಯೂರೋಪಿನಲ್ಲಿ ಕೋಟ್ಯಾಂತರ ಜನರು ಟೆಲಿವಿಷನ್‌ನಲ್ಲಿ ವೀಕ್ಷಿಸಿದರು. ವಿಜ್ಞಾನಿಗಳು ವಿಮಾನದಲ್ಲಿ ಪ್ರಯಾಣ ಮಾಡುತ್ತಾ ಅದನ್ನು ವೀಕ್ಷಿಸಿದರು. ಪ್ರಾಯಶಃ ಇತಿಹಾಸದಲ್ಲಿಯೇ ಬೇರಾವ ಸೂರ್ಯ ಗ್ರಹಣವೂ ಇಷ್ಟು ಚೆನ್ನಾಗಿ ಗೋಚರವಾಗಿರಲಿಲ್ಲ.ನುಗು ಜಲಾಶಯ ವೆಚ್ಚ ಮೂರು ಕೋಟಿ ರೂ.

ಬೆಂಗಳೂರು, ಫೆ. 15
- ನುಗು ಜಲಾಶಯ ಯೋಜನೆಗಾಗಿ ಕೊನೆಯದಾಗಿ ಪುನಃ ಪರಿಷ್ಕರಿಸಿದ ಅಂದಾಜು 3,11,14,418 ರೂಪಾಯಿಗೆ ರಾಜ್ಯ ಸರ್ಕಾರ ಮಂಜೂರಿಯನ್ನಿತ್ತಿದೆ. ಸಹಾಯ ಧನ ಮತ್ತು ನೀರಿನ ದರವನ್ನು ಮೈಸೂರು ನೀರಾವರಿ ಶಾಸನ, ನಿಯಮಾವಳಿಯ ಪ್ರಕಾರ ವಿಧಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry