ಗುರುವಾರ , ಫೆಬ್ರವರಿ 25, 2021
18 °C

ಸೃಷ್ಟಿ ನೃತ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೃಷ್ಟಿ ನೃತ್ಯೋತ್ಸವ

ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ ಭಾನುವಾರದಿಂದ ಗುರುವಾರದವರೆಗೆ (ಏ.29ರಿಂದ ಮೇ.3) ವಿಶ್ವ ನೃತ್ಯ ದಿನಾಚರಣೆ ಆಯೋಜಿಸಿದೆ.ನೃತ್ಯೋತ್ಸವದಲ್ಲಿ ಸುಮಾರು 50 ತಂಡಗಳ 200 ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಐದೂ ದಿನ ಪ್ರತಿಭಾನ್ವಿತ ಕಲಾವಿದರು ವಿವಿಧ ನೃತ್ಯ ಕಾರ್ಯಕ್ರಮಗಳ ರಸದೌತಣ ನೀಡಲಿದ್ದಾರೆ.ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10.30ಕ್ಕೆ ಅರನ್ನಯಿ ಭಾರ್ಗವ್ ಅವರಿಂದ ಭರತನಾಟ್ಯ. ಪೊನ್ನಯ್ಯ ಲಲಿತ ಕಲಾ ಅಕಾಡೆಮಿ ವಿದ್ಯಾರ್ಥಿಗಳಿಂದ ಭರತನಾಟ್ಯ. ಅಶ್ವಿನಿ ಮತ್ತು ಶ್ವೇತಾ ಕೃಷ್ಣಾ ಅವರಿಂದ `ಒಡಿಸ್ಸಿ~ ಕಾರ್ಯಾಗಾರ. ಭುವನೇಶ್ವರದ ಬಿಸ್ವಜಿತ್ ದಾಸ್ ಅವರಿಂದ ಒಡಿಸ್ಸಿ.ಪ್ರಿಯಾಂಕ ಅವರಿಂದ ಭರತನಾಟ್ಯ (ಗುರು ಪೂರ್ಣಿಮಾ ಮೋಹನ್‌ರಾಂ), ವಿಜಯವಾಡದ ರಜನಿ ಮಲ್ಲಾಡಿ ಅವರಿಂದ ಕೂಚಿಪುಡಿ ಪ್ರದರ್ಶನ. ಸಂಸ ಬಯಲು (ರವೀಂದ್ರ ಕಲಾಕ್ಷೇತ್ರ ಹಿಂಭಾಗ) ರಂಗಮಂದಿರದಲ್ಲಿ ಸಂಜೆ 6ಕ್ಕೆ ಕೋಲ್ಕತ್ತದ ದಾಮರ್ ಕೇಂದ್ರದ ತಂಡದಿಂದ ರವೀಂದ್ರ ನೃತ್ಯ ರೂಪಕ. ನಂತರ ಕೆ.ಪಿ. ಸತೀಶ್ ಬಾಬು ತಂಡದಿಂದ ಗೊಂಬೆ ನೃತ್ಯ. ದೆಹಲಿಯ ದೀಪಾಂಜಲಿ ಬಿಸ್ವಾಸ್ ಅವರಿಂದ ಮಣಿಪುರಿ ನೃತ್ಯ. ಶ್ರೀಲಕ್ಷ್ಮಿ  ತಂಡದಿಂದ ಭರತನಾಟ್ಯ (ಗುರು ಪದ್ಮಿನಿ ರಾಮಚಂದ್ರನ್). ಹೈದರಾಬಾದ್‌ನ ಪ್ರೀತಿ ತಾತಮಬೊತ್ಲಾ ಅವರಿಂದ ಕೂಚಿಪುಡಿ (ಗುರು ಶೋಭಾ ನಾಯ್ಡು). ಅಶ್ವಿನಿ ರಘುಪತಿ ಅವರಿಂದ ಒಡಿಸ್ಸಿ ನೃತ್ಯ.ರಾಜ್ಯಸಭಾ ಸದಸ್ಯೆ ಹಾಗೂ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ವಿಶ್ವ ನೃತ್ಯ ದಿನಾಚರಣೆ ಉದ್ಘಾಟಿಸಲಿದ್ದಾರೆ. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯ್ಲಿ, ಪೊಲೀಸ್ ಮಹಾ ನಿರ್ದೇಶಕ (ಹಂಗಾಮಿ) ಎಂ.ಆರ್.ಇನ್ಫಂಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಬುಧವಾರ ಸೃಷ್ಟಿ ಕೇಂದ್ರದ ನಿರ್ದೇಶಕ ಡಾ.ಎ.ವಿ.ಸತ್ಯನಾರಾಯಣ ಅವರ `ಬುದ್ಧ~ ಏಕವ್ಯಕ್ತಿ ನೃತ್ಯ ರೂಪಕ ಆಯೋಜಿಸಲಾಗಿದೆ.ಗುರುವಾರ ಮುಖ್ಯಮಂತ್ರಿ ಸದಾನಂದ ಗೌಡ ಅವರು ನೃತ್ಯಗಾರ್ತಿ ಸೋನಾಲ್ ಮಾನಸಿಂಗ್ ಅವರಿಗೆ `ಸೃಷ್ಟಿ ರಾಷ್ಟ್ರೀಯ ಸಾರ್ಥಕ ನೃತ್ಯ ಪ್ರಶಸ್ತಿ~ ಪ್ರದಾನ ಮಾಡಲಿದ್ದಾರೆ.ಸೋಮವಾರ ಎಡಿಎ ರಂಗಮಂದಿರ, ಮಂಗಳವಾರ (ಮೇ1) ಟೌನ್ ಹಾಲ್, ಬುಧವಾರ ಮತ್ತು ಗುರುವಾರ ರವೀಂದ್ರ ಕಲಾಕ್ಷೇತ್ರಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಮಾಹಿತಿಗೆ 98456 98089

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.