ಭಾನುವಾರ, ಮೇ 16, 2021
22 °C

ಸೆಂಟ್ರಲ್‌ನಲ್ಲಿ ಮಹಿಳಾ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆ ಹಾಗೂ ಶಾಪಿಂಗ್ ನಡುವೆ ಒಂದು ಅವಿನಾಭಾವ ಸಂಬಂಧ. ಶಾಪಿಂಗ್ ಅಂದಾಗ ಮಹಿಳೆ ಕಣ್ಣರಳಿಸುವಷ್ಟು ಇನ್ನಾವ ವಿಷಯಕ್ಕೂ ಅರಳಿಸುವುದಿಲ್ಲ ಎನ್ನುವ ಮಾತು ತಮಾಶೆ ಎನಿಸಿದರೂ ಸತ್ಯ.ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಇದನ್ನು ಪುಷ್ಟೀಕರಿಸುವ ರೀತಿಯಲ್ಲಿದೆ. ಸಾಮಾನ್ಯವಾಗಿ ಮಹಿಳೆಯೊಬ್ಬಳು ತನ್ನ ಜೀವಿತಾವಧಿಯಲ್ಲಿ 8 ವರ್ಷ ಶಾಪಿಂಗ್‌ನಲ್ಲಿ ಕಳೆಯುತ್ತಾಳಂತೆ. ಮನಸ್ಸಿಗೆ ಸಂತಸವಾಗಲಿ, ಬೇಸರವಾಗಲಿ ಅಥವಾ ಏನೂ ಕಾರಣ ಇಲ್ಲದಿದ್ದರೂ ಶಾಪಿಂಗ್ ಮಾಡುತ್ತಾರಂತೆ.ಈ ಹಿನ್ನೆಲೆಯಲ್ಲಿ ಯುಟಿಲಿಟಿ ಕಟ್ಟಡ ಬಳಿ ಮತ್ತು ಜಯನಗರದ `ಸೆಂಟ್ರಲ್ ಮಾಲ್~ ಕೂಡ ಮಹಿಳೆಯರಿಗಾಗಿ ಭಾನುವಾರದ ವರೆಗೆ ವಿಶೇಷ ಶಾಪಿಂಗ್ ಉತ್ಸವ ನಡೆಸುತ್ತಿವೆ. `ಫ್ಯಾಷನ್ ಶಿ ವಾಂಟ್ಸ್~  ಎಂಬ ಈ ಮೇಳದಲ್ಲಿ ಮಹಿಳೆಯರ ಅತ್ಯಾಧುನಿಕ ಆವಿಷ್ಕಾರ, ಫ್ಯಾಷನೇಬಲ್ ಹಾಗೂ ವೈವಿಧ್ಯಮಯ ಉಡುಗೆ-ತೊಡುಗೆಯ ಸಂಗ್ರಹಗಳಿವೆ.ಬೀಬಾ, ನೀರೂ, ಡಬ್ಲ್ಯು, ರಂಗಮಂಚ್ ಮುಂತಾದ ಬ್ರಾಂಡ್‌ಗಳ ಸಾಂಪ್ರದಾಯಿಕ (ಎಥ್ನಿಕ್) ಉಡುಗೆಯ ಅತ್ಯಾಕರ್ಷಕ ಸಂಗ್ರಹವನ್ನೂ ಇಲ್ಲಿ ಕಾಣಬಹುದು. ಆಧುನಿಕ ಮನೊಭಾವದ ಯುವತಿಯರು ಇಷ್ಟಪಡುವ 109ಎಫ್, ಪ್ರವೋಗ್, ರೆಮನಿಕಾ ಮುಂತಾದ ಬ್ರಾಂಡ್‌ಗಳ  ಪಾರ್ಟಿ ಉಡುಗೆಗಳು ವೈವಿಧ್ಯಮಯವಾಗಿವೆ. ಒಂದೊಂದು ಉಡುಗೆಯೂ ಪಾರ್ಟಿಗಳಲ್ಲಿ ಎಲ್ಲರ ಗಮನವನ್ನೂ ಸೆಳೆಯುವಷ್ಟು ಆಕರ್ಷಕವಾಗಿವೆ ಎನ್ನುತ್ತದೆ ಸೆಂಟ್ರಲ್ಉದ್ಯೋಗಸ್ಥ ಮಹಿಳೆಯರಿಗಾಗಿ ವ್ಯಾನ್ ಹುಸೇನ್, ಅನ್ನಾಬೆಲ್ಲೆ, ವೀಲ್ಸ್ ಲೈಫ್‌ಸ್ಟೈಲ್, ಸ್ಕಲ್ಲರ್ಸ್ ಮತ್ತಿತರ ಬ್ರಾಂಡ್‌ಗಳ ಕಾರ್ಪೊರೇಟ್ ಬೋರ್ಡ್‌ರೂಂ ಉಡುಗೆ, ಲರ್ಸ್‌ ಮುಂತಾದವನ್ನೂ ಸಂಗ್ರಹಿಸಲಾಗಿದೆ. ಇದೆಲ್ಲದರ ಜತೆ ಸಂಪೂರ್ಣವಾದ ಭಿನ್ನ ಲುಕ್‌ನೀಡಬಲ್ಲ ಉಡುಪುಗಳು, ಆಧುನಿಕ ಟ್ರೆಂಡ್‌ನ ಶೂ, ವಾಚುಗಳು, ಹ್ಯಾಂಡ್ ಬ್ಯಾಗ್, ಸೂಕ್ತ ಆಭರಣಗಳಿವೆ.ಇಲ್ಲಿ ಮಹಿಳೆಯರು ಶಾಪಿಂಗ್ ಜತೆಗೆ ಸಾಕಷ್ಟು ಉಚಿತ ಉಡುಗೊರೆ ಗಳಿಸುವ ಅವಕಾಶವಿದೆ. ಬಹುಮಾನದ ರೂಪದಲ್ಲಿ ಡಿಸೈನರ್ಸ್‌ ಸ್ಕರ್ವ್ಸ್, ನೆಕ್ ಪಿಕ್ಸ್, ಬ್ಯಾಗ್ ಹಾಗೂ ಇತ್ಯಾದಿ ವಸ್ತುಗಳನ್ನು ಗೆಲ್ಲಬಹುದು. 1500 ರೂಗಿಂತ ಅಧಿಕ ಮೊತ್ತದ ಮಹಿಳಾ ಉಡುಗೆ ಅಥವಾ ವಸ್ತು ಕೊಂಡು ಲಕ್ಕಿಡಿಪ್‌ನಲ್ಲಿ ಭಾಗವಹಿಸಿದರೆ ಟೊಯೋಟಾ ಇಟಿಯೋಸ್, ಅಂತಾರಾಷ್ಟ್ರೀಯ ರಜಾದಿನದ ಪ್ರವಾಸ ಮುಂತಾದ ಬಂಪರ್ ಬಹುಮಾನ ಗಳಿಸಬಹುದು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.