ಸೆಂಟ್ರಲ್ ಜೈಲ್ನಲ್ಲಿ ಹೊಡೆದಾಟ

7

ಸೆಂಟ್ರಲ್ ಜೈಲ್ನಲ್ಲಿ ಹೊಡೆದಾಟ

Published:
Updated:

`ಸೆಂಟ್ರಲ್ ಜೈಲ್~ನಲ್ಲಿ ಹೊಡೆದಾಟ

ಯಾವುದೋ ಕಾರಣಕ್ಕಾಗಿ ಚಿತ್ರದ ನಾಯಕ ಜೈಲು ಸೇರಿರುತ್ತಾನೆ. ಅಲ್ಲಿ ಆತನಿಗೆ ವ್ಯಕ್ತಿಯೊಬ್ಬನ ಪರಿಚಯವಾಗುತ್ತದೆ. ಜೈಲಿನಿಂದ ಬಂದ ತಕ್ಷಣ ನಾಯಕ ತಾನು ಶಿಕ್ಷೆ ಅನುಭವಿಸಲು ಕಾರಣನಾದವನ ಜೊತೆ ಹೊಡೆದಾಡುತ್ತಾನೆ. ಈ ದೃಶ್ಯವನ್ನು ತಾವರಕೆರೆ ಭೂತಬಂಗಲೆಯಲ್ಲಿ `ಸೆಂಟ್ರಲ್ ಜೈಲ್~ ಚಿತ್ರಕ್ಕಾಗಿ ನಿರ್ದೇಶಕ ಬಲರಾಂ ಚಿತ್ರಿಸಿಕೊಂಡರು. ಶ್ರೀಕಾಂತ್, ನೀನಾಸಂ ಅಶ್ವತ್ಥ್, ಶರತ್ ಲೋಹಿತಾಶ್ವ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.ಚಿತ್ರಕ್ಕೆ ಜಾನಕೀರಾಂ ಅವರ ನಿರ್ಮಾಣ,  ವಿ.ಮನೋಹರ್ ಸಂಗೀತ, ಜನಾರ್ದನ್  ಛಾಯಾಗ್ರಹಣ ಇದೆ.

`ರಾಘವೇಂದ್ರ~ರ ರಾಮ ಜಪ

`ರಾಘವೇಂದ್ರ ಮಹಿಮೆ~ ಚಿತ್ರಕ್ಕಾಗಿ ಸೂರ್ಯ ಅವರು ಬರೆದಿರುವ `ಶರಣು ಶರಣು ಶರಣು ಶ್ರೀರಾಮ~ ಎಂಬ ಗೀತೆಯ ಚಿತ್ರೀಕರಣ ಪುಟ್ಟಣ್ಣ ಸ್ಟುಡಿಯೋದಲ್ಲಿ ನಡೆದಿದೆ. ರವೀಂದ್ರ ಗೋಪಾಲ್ ಹಾಗೂ ಅಶ್ವಿನಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಶಿವಸುಬ್ರಹ್ಮಣ್ಯ ನೃತ್ಯ ನಿರ್ದೇಶನ ಮಾಡಿದರು.ಎರಡು ಗೀತೆಗಳ ಚಿತ್ರೀಕರಣ ಬಾಕಿಯ್ದ್ದಿದು, ಒಂದು ಗೀತೆಯ ಚಿತ್ರೀಕರಣ ಮಂತ್ರಾಲಯದಲ್ಲಿ ನಡೆದರೆ ಮತ್ತೊಂದರ ಚಿತ್ರೀಕರಣ ಉಡುಪಿ, ತಂಜಾವೂರು, ಕುಂಭಕೋಣ ಮುಂತಾದೆಡೆ ನಡೆಯಲಿದೆ. ತೆಲುಗು, ತಮಿಳಿನಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣಚಂದ್ರ ಈ ಚಿತ್ರದ ನಿರ್ದೇಶಕರು.

ಕಾಮಿಡಿ `ಸ್ನೇಹಿತರು~

ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ `ಸ್ನೇಹಿತರು~ ಚಿತ್ರಕ್ಕಾಗಿ ನೆಲಮಂಗಲದ ಖಾಸಗಿ ನಿವಾಸವೊಂದರಲ್ಲಿ ಕೆಲವು ಹಾಸ್ಯ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಯಿತು. ಸೃಜನ್ ಲೋಕೇಶ್, ಮಾ.ಸ್ನೇಹಿತ್, ರವಿಶಂಕರ್, ಪ್ರಣೀತಾ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ.

ರಾಮ್‌ನಾರಾಯಣ್ ರಚನೆ ಹಾಗೂ ನಿರ್ದೇಶನದ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry