ಸೆಕ್ಸಿ ಪ್ರಿಯಾಂಕಾ

ಸೋಮವಾರ, ಜೂಲೈ 22, 2019
26 °C

ಸೆಕ್ಸಿ ಪ್ರಿಯಾಂಕಾ

Published:
Updated:

ಪ್ರಿಯಾಂಕಾ ಚೋಪ್ರಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಸುದ್ದಿ ಕೇಳಿ ಬಾಲಿವುಡ್‌ನ ಇತರ ನಟಿಯರ ಹೊಟ್ಟೆಯಲ್ಲಿ ಬೆಂಕಿ ಹೊತ್ತಿದಂತಾಗಿದೆಯಂತೆ. ಇದೇ ಸಂದರ್ಭದಲ್ಲಿ ಅವರ ಹುಚ್ಚು ಅಭಿಮಾನಿಗಳು `ಇಷ್ಟು ಸಾಲದು, ಮತ್ತಷ್ಟು ಬೇಕು' ಎಂದು ಮೊರೆ ಇಡುತ್ತಿದ್ದಾರಂತೆ. ಯಾಕೆಂದರೆ ಪ್ರಿಯಾಂಕಾ ಚೋಪ್ರಾ ಬಂಗಾರ ಬಣ್ಣದ ಸ್ವಿಮ್ ಸೂಟ್ ಧರಿಸಿ ಸಾಗರದ ತಟದಿಂದ ಎದ್ದು ಬರುವ ದೃಶ್ಯದ ಚಿತ್ರವೊಂದು ಈಗ ಬಹಿರಂಗಗೊಂಡಿದೆ. ಈಜುಡುಗೆ ತೊಡುವುದು ಅವರಿಗೆ ಹೊಸತಲ್ಲದಿದ್ದರೂ ಕರಣ್ ಜೋಹರ್ ನಿರ್ದೇಶನದ `ದೋಸ್ತಾನಾ' ಚಿತ್ರಕ್ಕಾಗಿ ಅವರು ತೊಟ್ಟಿರುವ ದಿರಿಸಿಗೆ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಚುಂಬಕ ಶಕ್ತಿ ಇದೆ.ಪ್ರಿಯಾಂಕಾ ತಮ್ಮ ಧ್ವನಿ ಹಾಗೂ ಮಾದಕ ನೋಟದಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಆದರೆ ಈ ನೂತನ ವಿಡಿಯೊದಲ್ಲಿ ಅವರನ್ನು ನೋಡಿದವರ ಪ್ರಕಾರ ಈ ಹಿಂದಿಗಿಂತಲೂ ಹೆಚ್ಚು ಆಕರ್ಷಕವಾಗಿ, ಮಾದಕವಾಗಿ ಕಂಡಿದ್ದಾರೆ.ಈ ಗೀತೆಯಲ್ಲಿ ಪ್ರಿಯಾಂಕಾ ತಾವಾಗಿಯೇ ಅಂಥ ಉಡುಗೆ ತೊಡುವ ಆಸಕ್ತಿ ತೋರಿದ್ದರಂತೆ. ಹೀಗಾಗಿ ಮಿಯಾಮಿ ಕಡಲಂಚಿನ ವಸ್ತ್ರದ ಶೈಲಿಯಲ್ಲಿ ಇರುವ ಈಜುಡುಗೆಯನ್ನು ಆಯ್ಕೆ ಮಾಡಿಕೊಂಡರು.ಕೆಲವು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಅವರಿಗೆ `ಸೆಕ್ಸಿ' ಎಂಬ ಪಟ್ಟ ದೊರೆತಿತ್ತು. ಇದೀಗ ಅದನ್ನು ಅರ್ಥಪೂರ್ಣ ಮಾಡಲೆಂಬಂತೆ ಅವರು ಅದೇ ವಸ್ತ್ರ ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry