ಸೆನ್ಸೆಕ್ಸ್ ಭಾರೀ ಕುಸಿತ, ರೂಪಾಯಿ ತತ್ತರ

7

ಸೆನ್ಸೆಕ್ಸ್ ಭಾರೀ ಕುಸಿತ, ರೂಪಾಯಿ ತತ್ತರ

Published:
Updated:
ಸೆನ್ಸೆಕ್ಸ್ ಭಾರೀ ಕುಸಿತ, ರೂಪಾಯಿ ತತ್ತರ

ಮುಂಬೈ (ಪಿಟಿಐ):  ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ(ಸೆನ್ಸೆಕ್ಸ್) ಗುರುವಾರ 720 ಅಂಶ ಕುಸಿಯಿತು. ಹಾಗೆಯೇ ಡಾಲರ್ ಎದುರು ರೂಪಾಯಿ 68 ರೂಗಳ ಕನಿಷ್ಠ ಮಟ್ಟಕ್ಕೆ ಕುಸಿಯಿತು.

ಬಂಡವಾಳದ ಹೊರ ಹರಿವು ಹೆಚ್ಚಿದ ಪರಿಣಾಮ ಡಾಲರ್ ಎದುರು ರೂಪಾಯಿ ಕುಸಿತ ಕಂಡಿತು. ಇದರ ಪರಿಣಾಮ ಐಟಿಸಿ, ಎಚ್ ಡಿಎಫ್ ಸಿ,ಮತ್ತು ರಿಲಯನ್ಸ್ ಇಂಡಸ್ಟ್ರೀಯ ಷೇರುಗಳು ಭಾರೀ ಕುಸಿತ ಕಂಡವು. ದೇಶದಿಂದ ರೂಪಾಯಿಯ ಹೊರ ಹರಿವು ಹೆಚ್ಚಿರುವುದೇ ಡಾಲರ್ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ದಲ್ಲಾಳಿಗಳು ತಿಳಿಸಿದ್ದಾರೆ. ಎನ್ಎಸ್ಇಯ  ಸಂವೇದಿ ಸೂಚ್ಯಂಕವು 220 ಅಂಶಗಳಷ್ಟು ಕುಸಿತ ಕಂಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry