ಮಂಗಳವಾರ, ಜನವರಿ 28, 2020
25 °C

ಸೆಪೆಕ್ ಟಕ್ರಾ: ರಾಜ್ಯ ತಂಡಗಳು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾರಾಷ್ಟ್ರದ ನಾಗಪುರದಲ್ಲಿ ಜ. 12ರಂದು ನಡೆಯಲಿರುವ 15ನೇ ರಾಷ್ಟ್ರೀಯ ಕಿರಿಯರ ಸೆಪೆಕ್ ಟಕ್ರಾ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ರಾಜ್ಯ ತಂಡವನ್ನು ಕರ್ನಾಟಕ ಅಮೆಚೂರ್ ಸೆಪೆಕ್ ಟಕ್ರಾ ಸಂಸ್ಥೆಯ ಕಾರ್ಯದರ್ಶಿ ಪಿ. ಮಂಜುನಾಥ್ ಪ್ರಕಟಿಸಿದ್ದಾರೆ.ಧಾರವಾಡ ಜೆಎಸ್‌ಎಸ್ ಕಾಲೇಜಿನ ಎಸ್.ಎಸ್. ಬಂಡಿ ಬಾಲಕರ ತಂಡದ ಹಾಗೂ ಸೌಂದರ್ಯ ಚಳ್ಳಕೆರೆ ಬಾಲಕಿಯರ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.ತಂಡಗಳು ಇಂತಿವೆ: ಬಾಲಕರು: ಎಸ್.ಎಸ್. ಬಂಡಿ (ನಾಯಕ), ಅವಿನಾಶ್ ಕಾಡೆ (ಇಬ್ಬರೂ ಜೆಎಸ್‌ಎಸ್ ಕಾಲೇಜು, ಧಾರವಾಡ), ದರ್ಶನ, ಗುರುರಾಜ ಚಿಕ್ಕಲಕಿ, ವಿಶಾಲ್ (ಎಲ್ಲರೂ ಚಂದರಗಿ), ಕೋಚ್: ಕೇಶವ ಸೂರ್ಯವಂಶಿ, ಮ್ಯಾನೇಜರ್: ಅರುಣಕುಮಾರ.ಬಾಲಕಿಯರು: ಸೌಂದರ್ಯ (ನಾಯಕಿ), ಪೂರ್ಣಶ್ರೀ (ಇಬ್ಬರೂ ಚಳ್ಳಕೆರೆ), ಕಾವ್ಯ, ಇಂದುಶ್ರೀ (ಇಬ್ಬರೂ ವಿಶ್ವಚೇತನ ಶಾಲೆ, ದಾವಣಗೆರೆ), ಚೈತನ್ಯಾ (ಎವಿಕೆ ಕಾಲೇಜು, ದಾವಣಗೆರೆ), ಕೋಚ್: ನಾಗೇಶ ದಾವಣಗೆರೆ ಮ್ಯಾನೇಜರ್: ಪರದೇಶಿ ವಿಲ್ಸನ್, ತಾಂತ್ರಿಕ ಅಧಿಕಾರಿ: ಪಿ.ಮಂಜುನಾಥ್.

ಪ್ರತಿಕ್ರಿಯಿಸಿ (+)