ಮಂಗಳವಾರ, ಮೇ 18, 2021
22 °C

ಸೆಪ್ಟೆಂಬರ್ ನಂತರ ಬ್ಯಾಂಕುಗಳ ವಿಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ(ಪಿಟಿಐ): ಐದು ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಸೆಪ್ಟೆಂಬರ್‌ನಿಂದ ಆರಂಭವಾಗಲಿದೆ ಎಂದು `ಭಾರತೀಯ ಸ್ಟೇಟ್ ಬ್ಯಾಂಕ್' ಹೇಳಿದೆ.`ಎಸ್‌ಬಿಐ' ವ್ಯವಸ್ಥಾಪಕ ನಿರ್ದೇಶಕ ಎಸ್.ವಿಶ್ವನಾಥನ್ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ವರದಿ ನೀಡಿದ ನಂತರ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆರಂಭವಾಗಲಿದೆ. ಈ ಸಮಿತಿ ಜುಲೈ-ಆಗಸ್ಟ್ ವೇಳೆಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದು `ಎಸ್‌ಬಿಐ' ಅಧ್ಯಕ್ಷ ಪ್ರತೀಪ್ ಚೌಧರಿ ವರದಿಗಾರರಿಗೆ ತಿಳಿಸಿದರು.ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಅಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಪ್ ಪಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ `ಎಸ್‌ಬಿಐ'ನಲ್ಲಿ  ವಿಲೀನ ಗೊಳ್ಳಲಿರುವ ಬ್ಯಾಂಕುಗಳು. 2 ಸಹವರ್ತಿ ಬ್ಯಾಂಕುಗಳು `ಎಸ್‌ಬಿಐ'ನ ನೇರ ಒಡೆತನ ಹೊಂದಿವೆ ಎಂದು ಹೇಳಿದರು.`ಬ್ಯಾಂಕುಗಳ ವಿಲೀನ ದೀರ್ಘ ಪ್ರಕ್ರಿಯೆ. ನೌಕರರ ವಿಶ್ವಾಸಾರ್ಹತೆ ಮತ್ತು ಸಹಭಾಗಿತ್ವ ಕೂಡ ಅಷ್ಟೇ ಮುಖ್ಯ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ 2008ರಲ್ಲಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂದೂರ್ 2010ರಲ್ಲಿ `ಎಸ್‌ಬಿಐ'ನಲ್ಲಿ ವಿಲೀನಗೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.