ಬುಧವಾರ, ಮೇ 25, 2022
29 °C

ಸೆಬಾಸ್ಟಿಯನ್ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಬಾಸ್ಟಿಯನ್ ದಾಖಲೆ

ಸುಜುಕಾ, ಜಪಾನ್ (ಎಎಫ್‌ಪಿ): ಜರ್ಮನಿಯ ಸೆಬಾಸ್ಟಿಯನ್ ವೆಟೆಲ್  ಫಾರ್ಮುಲಾ ಒನ್ ಗ್ರ್ಯಾಂಡ್ ಪ್ರಿ ರೇಸಿಂಗ್‌ನಲ್ಲಿ ದಾಖಲೆ ಮಾಡಿದರು.ರೆಡ್ ಬುಲ್‌ನ ಚಾಲಕ 24 ವರ್ಷದ ಸೆಬಾಸ್ಟಿಯನ್ ಅವರು ಅತ್ಯುತ್ತಮ ಪ್ರದರ್ಶನದ ಮೂಲಕ 2011ರ ಫಾರ್ಮುಲಾ ಒನ್ ಚಾಂಪಿಯನ್ ಆದರು. ಇದರೊಂದಿಗೆ ಸತತ ಎರಡನೇ ಬಾರಿ ಈ ಗೌರವ ಪಡೆದ ಕಿರಿಯ ಚಾಲಕ ಎನಿಸಿದರು.ವೆಟೆಲ್ 324 ಪಾಯಿಂಟ್ ಹೊಂದಿದ್ದಾರೆ. ಜೆನ್ಸನ್ ಬಟನ್ 210 ಪಾಯಿಂಟ್ಸ್ ಗಳಿಸಿದ್ದಾರೆ.

 ವೆಟೆಲ್ ಇಲ್ಲಿ ನಡೆದ ಜಪಾನ್ ಫಾರ್ಮುಲಾ ಒನ್ ಗ್ರ್ಯಾಂಡ್ ಪ್ರಿನಲ್ಲಿ ಮೂರನೇ ಸ್ಥಾನ ಪಡೆದರು. ಆದರೆ ಒಟ್ಟಾರೆ ಪಾಯಿಂಟ್‌ಗಳ ಆಧಾರ ಮೇಲೆ ಈ ಬಾರಿಯ ಪ್ರಶಸ್ತಿ ಜಯಿಸಿದರು.ಈ ರೇಸ್‌ನ ಮೊದಲೆರೆಡು ಸ್ಥಾನಗಳು ಜೆನ್ಸನ್ ಬಟನ್ ಹಾಗೂ ಫೆರ್ನಾಂಡೊ ಅಲೊನ್ಸ್ ಅವರ ಪಾಲಾಯಿತು.

ಭಾರತಕ್ಕೆ ನಿರಾಸೆ: ಫೋರ್ಸ್ ಇಂಡಿಯಾದ ಅಡ್ರಿಯಾನ್ ಸುಟಿಲ್ ಹಾಗೂ ಪಾಲ್ ಡಿ ರೆಸ್ಟ್ ಈ ಗ್ರ್ಯಾಂಡ್ ಪ್ರಿ ರ‌್ಯಾಲಿಯಲ್ಲಿ ಯಾವುದೇ ಪಾಯಿಂಟ್‌ಗಳಿಲ್ಲದೇ ನಿರಾಸೆ ಅನುಭವಿಸಬೇಕಾಯಿತು.ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡದ ಇಬ್ಬರೂ ಸ್ಪರ್ಧಿಗಳು ಕ್ರಮವಾಗಿ 11 ಹಾಗೂ 12ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.   `ಕೆಟ್ಟ ಆರಂಭ ಪಡೆದೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮುಂದೆ ಪ್ರದರ್ಶನ ಮಟ್ಟ ಸುಧಾರಿಸಿಕೊಳ್ಳುತ್ತೇನೆ~ ಎಂದು ಸುಟಿಲ್ ಹೇಳಿದರು. ಫೋರ್ಸ್ ಇಂಡಿಯಾ 48 ಪಾಯಿಂಟ್ಸ್‌ಗಳನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.