ಸೆಬಾಸ್ಟಿಯನ್ ಸ್ಟುಡಿಯೊ

7

ಸೆಬಾಸ್ಟಿಯನ್ ಸ್ಟುಡಿಯೊ

Published:
Updated:

ಕಳೆದುಕೊಂಡಿದ್ದನ್ನು ಕಳೆದುಕೊಂಡ ಸ್ಥಳದಲ್ಲೇ ಹುಡುಕು ಎನ್ನುವಂತೆ ಸೆಬಾಸ್ಟಿನ್ ಡೇವಿಡ್ ಹೊಸ ಸಾಹಸಕ್ಕೆ ಇಳಿದಿದ್ದಾರೆ. ಕಳೆದ 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದು ಕಹಿ ಉಂಡಿರುವ ಅವರು, ಇದೀಗ ಸ್ಟುಡಿಯೊ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.ಬೆಂಗಳೂರಿನ ಆರ್.ಟಿ. ನಗರದ ದೇವೇಗೌಡ ರಸ್ತೆಯಲ್ಲಿ ಡೇವಿಡ್ ಅವರ `ವಿ.ಜಿ. ಆಡಿಯೋವಿಜನ್' ಹೆಸರಿನ ಫಿಲಂ ಎಡಿಟಿಂಗ್ ಹಾಗೂ ರೆಕಾರ್ಡಿಂಗ್ ಸ್ಟುಡಿಯೊ ಕಳೆದ ವಾರ ಆರಂಭಗೊಂಡಿದೆ.5.1 ರೆಕಾರ್ಡಿಂಗ್ ಸ್ಟುಡಿಯೋ, ಫಿಲಂ ಅಂಡ್ ಟಿ.ವಿ. ಎಡಿಟಿಂಗ್‌ಗೆ ಅವಕಾಶ ಸೇರಿದಂತೆ ಸುಮಾರು 25 ಜನ ಕುಳಿತು ವೀಕ್ಷಿಸಬಹುದಾದ ಮಿನಿ ಡಿಜಿಟಲ್ ಪ್ರಿವ್ಯೆ ಥಿಯೇಟರ್ ಇಲ್ಲಿದೆ. ಫೋಟೋಶೂಟ್, ಕಾರ್ಪೋರೇಟ್ ಫಿಲಂ ಶೂಟಿಂಗ್‌ಗಾಗಿ ಎ.ಸಿ. ಸ್ಟುಡಿಯೋ ಇರುವ ಆಧುನಿಕ ಶೈಲಿಯ ಈ ಸ್ಟುಡಿಯೋ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಬಿ. ವಿಜಯಕುಮಾರ್ ಅನಾವರಣಗೊಳಿಸಿದ್ದಾರೆ.`ಚಿತ್ರರಂಗಕ್ಕೆ ಬರುತ್ತಿರುವ ಕಡಿಮೆ ಬಂಡವಾಳ ಹೂಡುವ ನಿರ್ಮಾಪಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸ್ಟುಡಿಯೋ ನಿರ್ಮಿಸಲಾಗಿದೆ' ಎನ್ನುವ ಸೆಬಾಸ್ಟಿಯನ್, ಸದ್ಯದಲ್ಲೇ ಡಿಐ ತಂತ್ರಜ್ಞಾನವನ್ನು ತಮ್ಮ ಸ್ಟುಡಿಯೋದಲ್ಲಿ ಅಳವಡಿಸುತ್ತಿದ್ದಾರಂತೆ.1997ರಲ್ಲಿ `ಕಳ್ಳ ಬಂದ ಕಳ್ಳ' ಸಿನಿಮಾ ನಿರ್ಮಿಸಿದ್ದ ಅವರು ಸೋಲು ಕಂಡಿದ್ದರು. ವಿತರಕರಾಗಿ ಕೂಡ ಅವರು ಹೆಚ್ಚಿನ ಯಶಸ್ಸು ಗಳಿಸಿಲ್ಲ. ಈ ಕಹಿಯೆಲ್ಲ ಸ್ಟುಡಿಯೊ ಮೂಲಕ ನೀಗುವ ಭರವಸೆ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry