ಸೆಬಿಗೆ ಯು. ಕೆ. ಸಿನ್ಹಾ ನೇಮಕ

7

ಸೆಬಿಗೆ ಯು. ಕೆ. ಸಿನ್ಹಾ ನೇಮಕ

Published:
Updated:ನವದೆಹಲಿ (ಪಿಟಿಐ): ಬಂಡವಾಳ ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾಗಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ‘ಯುಟಿಐ ಎಎಂಸಿ’ ಮುಖ್ಯಸ್ಥ ಯು. ಕೆ. ಸಿನ್ಹಾ ಅವರನ್ನು ನೇಮಿಸಲಾಗಿದೆ.ಈ ತಿಂಗಳ 17ರಂದು ಸಿ. ಬಿ. ಭಾವೆ ನಿವೃತ್ತಿಯಾಗಲಿದ್ದಾರೆ.  ಫೆ. 18ರಿಂದ ಜಾರಿಗೆ ಬರುವಂತೆ ಸಿನ್ಹಾ ಅವರ ಅಧಿಕಾರಾವಧಿ 3 ವರ್ಷಗಳದ್ದು ಆಗಿರುತ್ತದೆ.ಸಿನ್ಹಾ ಅವರು 2002ರಿಂದ 2005ರ ಅವಧಿಯಲ್ಲಿ ಹಣಕಾಸು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು.

ಸ್ವಾಗತ: ಷೇರುಪೇಟೆ ವಿಶ್ಲೇಷಕರು ಸಿನ್ಹಾ ಅವರ ನೇಮಕಾತಿಯನ್ನು ಸ್ವಾಗತಿಸಿದ್ದು, ಸದ್ಯಕ್ಕೆ ಮಾರುಕಟ್ಟೆಯಲ್ಲಿ ವಹಿವಾಟು ತೀವ್ರ ಏರಿಳಿತ ಕಾಣುತ್ತಿರುವುದರಿಂದ ಈ ಹುದ್ದೆ ನಿಭಾಯಿಸುವುದು ಅವರ ಪಾಲಿಗೆ ಹೂವಿನ ಹಾಸಿಗೆಯಾಗಿರುವುದಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಹಣಕಾಸು ಸೇವೆಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಮತ್ತು ಅಪಾರ ಅನುಭವ ಹೊಂದಿರುವ ಸಿನ್ಹಾ ಅವರ ನೇಮಕಾತಿಯು ಉತ್ತಮ ಆಯ್ಕೆಯಾಗಿದೆ ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry