ಗುರುವಾರ , ಏಪ್ರಿಲ್ 15, 2021
22 °C

ಸೆಬಿ ಮಾರುಕಟ್ಟೆ ಸುಧಾರಣೆಗೆ ಇನ್ನಷ್ಟು ಕ್ರಮ: ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾರುಕಟ್ಟೆ ಸುಧಾರಣೆಗೆ ಸಂಬಂಧಿಸಿದಂತೆ ಇನ್ನಷ್ಟು ಸುಧಾರಣೆಗಳನ್ನು ಮುಂದಿನ ತಿಂಗಳು ಪ್ರಕಟಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.ಚಿನ್ನ ಹೊರತುಪಡಿಸಿ ಇತರೆ ಸಂಪತ್ತುಗಳ ಮೇಲೆ ಬಂಡವಾಳ ತೊಡಗಿಸಲು ಹೂಡಿಕೆದಾರರನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಸೆಪ್ಟೆಂಬರ್‌ನಲ್ಲಿ `ಸೆಬಿ~ ನಿರ್ದೇಶಕ ಮಂಡಳಿ ಮತ್ತೊಂದು ಸುತ್ತಿನ ಸಭೆ ನಡೆಸುವ ಸಾಧ್ಯತೆ ಇದೆ ಎಂದಿದ್ದಾರೆ.ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆಯಡಿ (ಆರ್‌ಜಿಇಎಸ್‌ಎಸ್) ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ತೆರಿಗೆ ವಿನಾಯ್ತಿ ನೀಡಬೇಕೆಂದು `ಸೆಬಿ~ ಶಿಫಾರಸು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ ಎಂದರು.`ಸೆಬಿ~ ಪರಿಷ್ಕೃತ ನಿಯಮದಂತೆ ಐಪಿಒ~ ಹೂಡಿಕೆ ಇನ್ನಷ್ಟು ಸರಳ ಮತ್ತು ಅಗ್ಗವಾಗಿದೆ. ಆದರೆ, ಮ್ಯೂಚವಲ್ ಫಂಡ್ ದುಬಾರಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.