ಬುಧವಾರ, ನವೆಂಬರ್ 13, 2019
22 °C

`ಸೆಬಿ' ವಿಚಾರಣೆ: ಸುಬ್ರತಾ ರಾಯ್ ಇಂದು ಹಾಜರಿ

Published:
Updated:

ಮುಂಬೈ(ಪಿಟಿಐ): ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಶನಿವಾರ ಷೇರು ನಿಯಂತ್ರಣ ಮಂಡಳಿ(ಸೆಬಿ) ಎದುರು ಹಾಜರಾಗಿ ತಮ್ಮ ಸಮೂಹದ ಬ್ಯಾಂಕ್ ಖಾತೆಗಳು ಮತ್ತಿತರೆ ಸ್ಥಿರಾಸ್ತಿಗಳ ವಿಚಾರವಾಗಿ ವಿವರಣೆ ನೀಡಲಿದ್ದಾರೆ.ಷೇರುದಾರರ ರೂ24,000 ಕೋಟಿ ಹಣ ವಾಪಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿರುವ ಸಹಾರಾ ಸಮೂಹದ ಬ್ಯಾಂಕ್ ಖಾತೆಗಳು ಮತ್ತು ಹಲವು ಸ್ಥಿರಾಸ್ತಿಗಳನ್ನು `ಸೆಬಿ' ಸದ್ಯ ಜಪ್ತಿ ಮಾಡಿಕೊಂಡಿದೆ. ಈ ಸಂಬಂಧ ಶನಿವಾರ ಪ್ರಾಥಮಿಕ ಹಂತದ ವಿಚಾರಣೆಯನ್ನು `ಸೆಬಿ' ಕೈಗೆತ್ತಿಕೊಳ್ಳಲಿದೆ.

ಪ್ರತಿಕ್ರಿಯಿಸಿ (+)