ಸೆಮಿಕಂಡಕ್ಟರ್ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

7

ಸೆಮಿಕಂಡಕ್ಟರ್ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

Published:
Updated:

ಬೆಂಗಳೂರು: `ದೇಶದಲ್ಲಿ ಸೆಮಿಕಂಕ್ಟರ್ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ~ ಎಂದು ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಸಚಿನ್ ಪೈಲಟ್ ಹೇಳಿದರು.

 ನಗರದಲ್ಲಿ ನಡೆದ ಇಂಡಿಯಾ ಸೆಮಿಕಂಡಕ್ಟರ್ ಅಸೋಸಿಯೇಷನ್ ಆಯೋಜಿಸಿದ್ದ `ಐಎಸ್‌ಎ ವಿಷನ್ ಸಮಿಟ್~ ವಿದ್ಯುನ್ಮಾನ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.`ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಚೀನಾ ಹಾಗೂ ಕೊರಿಯಾ ದೇಶಗಳು ಇಂದು ಜಗತ್ತಿನ ಮುಂಚೂಣಿ ದೇಶಗಳಾಗಿ ಬೆಳೆಯುತ್ತಿವೆ. ಕೊರಿಯಾದಲ್ಲಿ ಉತ್ತಮ ಗುಣಮಟ್ಟದ ತಂತ್ರಜ್ಞಾನವಿದ್ದರೂ ಮಾರುಕಟ್ಟೆ ಸರಿಯಾಗಿಲ್ಲ. ಚೀನಾ ದೇಶಕ್ಕೆ ಉತ್ತಮ ಮಾರುಕಟ್ಟೆ ಇದ್ದರೂ ಗುಣಮಟ್ಟ ಸರಿಯಾಗಿಲ್ಲ. ಆದರೆ, ನಮ್ಮ ದೇಶದಲ್ಲಿ ಗುಣಮಟ್ಟ ಹಾಗೂ ಮಾರುಕಟ್ಟೆ ಎರಡೂ ಉತ್ತಮವಾಗಿವೆ ಎಂದರು.`ಕೇಂದ್ರ ಸರ್ಕಾರವು ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರಗಳ ಸಹಕಾರ ಅತ್ಯಗತ್ಯ. ಸ್ಥಳೀಯ ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರವಿಲ್ಲದೇ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ~ ಎಂದರು.ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಆರ್.ಚಂದ್ರಶೇಖರ್ ಮಾತನಾಡಿ,  `ವಿಶ್ವವನ್ನೇ ಮುನ್ನಡೆಸುವ ಮಾರ್ಗದಲ್ಲಿ ಭಾರತ ಸಾಗುತ್ತಿದೆ. ದೇಶದಲ್ಲಿನ ಮೂಲ ಸೌಕರ್ಯಗಳ ಕೊರತೆಯೂ ಸೇರಿದಂತೆ ಅನೇಕ ಸವಾಲುಗಳೊಂದಿಗೆ ಅಭಿವೃದ್ಧಿಗಾಗಿ ನಮ್ಮದೇ ಮಾರ್ಗವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry