ಸೆಮಿಗೆ ಅಪೇಕ್ಷಾ, ಅಶ್ವಿನಿ

7
ರಾಜ್ಯ ಬ್ಯಾಡ್ಮಿಂಟನ್ ಟೂರ್ನಿ: ಅರ್ಚನಾ, ರಮ್ಯಾಗೆ ನಿರಾಸೆ

ಸೆಮಿಗೆ ಅಪೇಕ್ಷಾ, ಅಶ್ವಿನಿ

Published:
Updated:

ಶಿವಮೊಗ್ಗ: ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ (ಪಿಪಿಬಿಎ) ಕೆ. ಅಶ್ವಿನ್‌ ಭಟ್‌ ಮತ್ತು ಅಪೇಕ್ಷಾ ನಾಯಕ್‌ ಇಲ್ಲಿ ನಡೆಯುತ್ತಿರುವ ಲೀ ನಿಂಗ್‌ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ ಮತ್ತು ಶಿವಮೊಗ್ಗ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ಈ ಟೂರ್ನಿ ನಡೆಯುತ್ತಿದೆ. ಬಾಲಕಿಯರ 15 ವರ್ಷದೊಳಗಿನವರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಅಪೇಕ್ಷಾ 21–13, 14–5ರಲ್ಲಿ ಗ್ಯಾಲಕ್ಸಿ ಕ್ಲಬ್‌ನ ಸಿ.ವಿ. ರಮ್ಯಾ (ನಿವೃತ್ತಿ) ಎದುರು ಗೆಲುವು ಸಾಧಿಸಿದರು. 17 ವರ್ಷದೊಳಗಿನವರ ಸಿಂಗಲ್ಸ್‌ನಲ್ಲಿ ಅಶ್ವಿನಿ 21–15, 20–22, 21–14ರಲ್ಲಿ ತಮ್ಮದೇ ಕ್ಲಬ್‌ನ ಅರ್ಚನಾ ಪೈ ಎದುರು ಗೆಲುವು ಸಾಧಿಸಿ ನಾಲ್ಕರ ಘಟ್ಟ ತಲುಪಿದರು. ಶನಿವಾರದ ಪಂದ್ಯಗಳಲ್ಲಿಯೂ ಪ್ರಕಾಶ್‌ ಪಡುಕೋಣೆ ಅಕಾಡೆಮಿಯ ಸ್ಪರ್ಧಿಗಳು ಪ್ರಾಬಲ್ಯ ಮೆರೆದರು.ಇದೇ ವಿಭಾಗದ ಇನ್ನಷ್ಟು ಎಂಟರ ಘಟ್ಟದ ಪಂದ್ಯಗಳಲ್ಲಿ ಮಹಿಮಾ ಅಗರ್‌ವಾಲ್‌ 21–15, 21–10ರಲ್ಲಿ  ಬೆಳ­ಗಾವಿಯ ಮೆರ್ನಜ್‌ ಇರಾನಿ ಮೇಲೂ, ಅಪೇಕ್ಷಾ 19–21, 21–8, 21–9ರಲ್ಲಿ ಹರ್ಷಲಾ ದಿನಕರ್‌ ವಿರುದ್ಧವೂ, ಶಿಖಾ ಗೌತಮ್‌ 21–8, 21–9ರಲ್ಲಿ ಆರ್.ಎನ್‌. ಸವಿತಾ ಮೇಲೂ ಗೆಲುವು ಪಡೆದರು.15 ವರ್ಷದೊಳಗಿನವರ ವಿಭಾಗದ ರೇಣು ತಿರುಮಲ 21–18, 18–21, 21–15ರಲ್ಲಿ  ಶಿವಾನಿ ಪಾಠಿ ಮೇಲೂ, ಅಶ್ವಿನ್‌ ಭಟ್‌ 21–16, 16–21, 21–17ರಲ್ಲಿ ಅರ್ಚನಾ ಪೈ ವಿರುದ್ದವೂ, ಸರುಯು 21–17, 21–16ರಲ್ಲಿ ಪಿಪಿಬಿಎ ತೃಷಾ ಹೆಗ್ಡೆ ಮೇಲೂ ಗೆಲುವು ಸಾಧಿಸಿದರು.ಸೆಮಿಗೆ ಅಜಿಂಕ್ಯ: ಬಾಲಕರ 13 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಬೆಳಗಾವಿಯ ಅಜಿಂಕ್ಯ ಜೋಶಿ 21–17, 21–17ರಲ್ಲಿ ಡಬ್ಲ್ಯುಪಿಬಿಎ ಕ್ಲಬ್‌ನ ಶಶಾಂಕ್‌ ರೆಡ್ಡಿ ಎದುರು ಗೆಲುವು ಪಡೆದು ಸೆಮಿಫೈನಲ್‌ ಪ್ರವೇಶಿಸಿದರು.ಇದೇ ವಿಭಾಗದ ಇನ್ನಷ್ಟು ಪಂದ್ಯಗಳಲ್ಲಿ ವಿ. ಕಾರ್ತಿಕ್‌ 21–10, 21–12ರಲ್ಲಿ ಡಿವೈಎಸ್‌ಎಸ್‌ನ ಕೆ. ಪೃಥ್ವಿ ರಾಯ್‌ ಮೇಲೂ, ಸಿ.ಎಸ್‌. ಸಾಕೇತ್‌ 18–21, 21–16, 21–19ರಲ್ಲ ಶ್ರೀಕರ್‌ ರಾಜೇಶ್‌ ವಿರುದ್ಧವೂ, ಬೆಳಗಾವಿಯ ತೇಜಸ್‌ ಸಂಜಯ್‌ 21–15, 21–17ರಲ್ಲಿ ಎಂ. ರೋಹಿತ್‌ ಕೃಷ್ಣ ಮೇಲೂ ಜಯ ಸಾಧಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.ಪ್ರಶಸ್ತಿ ಘಟ್ಟಕ್ಕೆ ಪೂಜಾಶ್ರೀ ಜೋಡಿ: ಬಾಲಕಿಯರ 17 ವರ್ಷದೊಳಗಿನವರ ವಿಭಾಗದ ಡಬಲ್ಸ್‌ನಲ್ಲಿ ಪೂಜಾಶ್ರೀ ಹಾಗೂ ರಂಜಿತಾ ಜೋಡಿ ಫೈನಲ್‌ ತಲುಪಿತು. ನಾಲ್ಕರ ಘಟ್ಟದ ಹೋರಾಟದಲ್ಲಿ ಈ ಜೋಡಿ 21–16, 19–21, 21–13ರಲ್ಲಿ ಹರ್ಷಲಾ ದಿನಕರ್‌ ಹಾಗೂ ಎಂ. ನವ್ಯಾ ಕಾಡೇಕರ್‌ ಎದುರು ಜಯ ಸಾಧಿಸಿದರು.ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಮಹಿಮಾ ಅಗರ್‌ವಾಲ್–ಶಿಖಾ ಗೌತಮ್‌ 21–15, 21–9ರಲ್ಲಿ ಮಂಗಳೂರಿನ ಪ್ರತೀಕ್ಷಾ ಪ್ರಕಾಶ್–ಸವಿತಾ ಅವರನ್ನು ಸೋಲಿಸಿ ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry