ಸೋಮವಾರ, ಮಾರ್ಚ್ 8, 2021
22 °C
ವಿಶ್ವ ಕ್ರೀಡಾಕೂಟದ ಸ್ನೂಕರ್: ಅಡ್ವಾಣಿಗೆ ನಿರಾಸೆ

ಸೆಮಿಫೈನಲ್‌ಗೆ ಆದಿತ್ಯ ಮೆಹ್ತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಫೈನಲ್‌ಗೆ ಆದಿತ್ಯ ಮೆಹ್ತಾ

ನವದೆಹಲಿ (ಪಿಟಿಐ): ಉತ್ತಮ ಪ್ರದರ್ಶನ ತೋರಿದ ಭಾರತದ  ಅಗ್ರ ರ‌್ಯಾಂಕ್‌ನ ಸ್ನೂಕರ್ ಸ್ಪರ್ಧಿ ಆದಿತ್ಯ ಮೆಹ್ತಾ ಕೊಲಂಬಿಯದಲ್ಲಿ ನಡೆಯುತ್ತಿರುವ ವಿಶ್ವ ಕ್ರೀಡಾಕೂಟದ ಸ್ನೂಕರ್ ಸ್ಪರ್ಧೆಯ ಸೆಮಿಫೈನಲ್ ಪ್ರವೇಶಿಸಿದರು. ಆದರೆ ಪಂಕಜ್ ಅಡ್ವಾಣಿ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಮೆಹ್ತಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 3-2 ರಲ್ಲಿ ಇಂಗ್ಲೆಂಡ್‌ನ ಪೆರ‌್ರಿ ರೇಮಂಡ್ ವಿರುದ್ಧ ಜಯ ಪಡೆದರು.ಭಾರತದ ಆಟಗಾರ ನಾಲ್ಕರಘಟ್ಟದ ಪಂದ್ಯದಲ್ಲಿ ಥಾಯ್ಲೆಂಡ್‌ನ ದೆಚಾವತ್ ಪೂಮ್‌ಜಾಯೆಂಗ್ ಅವರ ಸವಾಲನ್ನು ಎದುರಿಸುವರು.

ಮೆಹ್ತಾ ಮೊದಲ ಸುತ್ತಿನ ಪಂದ್ಯದಲ್ಲಿ ಗ್ವಾಟೆಮಾಲದ ಲೂಯಿಸ್ ಲೆಮಸ್ ಎದುರು 3-0 ರಲ್ಲಿ ಸುಲಭ ಜಯ ಸಾಧಿಸಿದ್ದರು. ಆದರೆ ವಿಶ್ವ ರ‌್ಯಾಂಕ್‌ನಲ್ಲಿ 19ನೇ ಸ್ಥಾನದಲ್ಲಿರುವ ಪೆರ‌್ರಿ ವಿರುದ್ಧ ಗೆಲುವು ಪಡೆಯಲು ಸಾಕಷ್ಟು ಪ್ರಯಾಸಪಟ್ಟರು.ಪ್ರಸಕ್ತ ವಿಶ್ವ ರ‌್ಯಾಂಕ್‌ನಲ್ಲಿ 74ನೇ ಸ್ಥಾನದಲ್ಲಿರುವ ಮೆಹ್ತಾ 2010ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.

ಅಡ್ವಾಣಿ ಅವರು ದೆಚಾವತ್ ಪೂಮ್‌ಜಾಯೆಂಗ್ ಕೈಯಲ್ಲಿ 1-3 ರಲ್ಲಿ ಸೋಲು ಅನುಭವಿಸಿದರು. ಎಂಟು ಬಾರಿಯ ವಿಶ್ವ ಚಾಂಪಿಯನ್ ಅಡ್ವಾಣಿ ಎಂದಿನ ಲಯದಲ್ಲಿ ಆಡಲು ವಿಫಲರಾದರು. ಒಂದು ಫ್ರೇಮ್ ಗೆಲ್ಲಲು ಮಾತ್ರ ಶಕ್ತರಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.