ಸೆಮಿಫೈನಲ್‌ಗೆ ಕರ್ನಾಟಕದ ಬಾಲಕಿಯರು

7
ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿ

ಸೆಮಿಫೈನಲ್‌ಗೆ ಕರ್ನಾಟಕದ ಬಾಲಕಿಯರು

Published:
Updated:
ಸೆಮಿಫೈನಲ್‌ಗೆ ಕರ್ನಾಟಕದ ಬಾಲಕಿಯರು

ದಾವಣಗೆರೆ: ಕರ್ನಾಟಕದ ಬಾಲಕ- ಬಾಲಕಿಯರ ತಂಡಗಳು ಇಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಮಧ್ಯಪ್ರದೇಶದ ತಂಡಗಳನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿವೆ. ಅದೇ ರೀತಿ ಛತ್ತೀಸ್‌ಗಡ ಬಾಲಕ ಬಾಲಕಿಯರ ತಂಡಗಳು ಕ್ರಮವಾಗಿ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ತಂಡಗಳನ್ನು ಮಣಿಸಿವೆ.ಗುರುವಾರ ಕರ್ನಾಟಕದ ಬಾಲಕರು ದೆಹಲಿಯನ್ನು, ಬಾಲಕಿಯರು ಪಂಜಾಬ್ ತಂಡವನ್ನು ಎದುರಿಸಲಿದ್ದಾರೆ. ಛತ್ತೀಸ್‌ಗಡ ಬಾಲಕರ ತಂಡವು ಪಂಜಾಬನ್ನು ಎದುರಿಸಲಿದೆ. ಬಾಲಕಿಯರ ತಂಡವು ಹರಿಯಾಣವನ್ನು ಎದುರಿಸಲಿದೆ.ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ನಡೆಯುತ್ತಿರುವ 58ನೇ ರಾಷ್ಟ್ರಮಟ್ಟದ 17ರ ವಯೋಮಿತಿಯೊಳಗಿನ ಶಾಲಾ ಬಾಲಕ-ಬಾಲಕಿಯರ ನೆಟ್‌ಬಾಲ್ ಟೂರ್ನಿಯ ಆರಂಭದಿಂದಲೇ ಉತ್ತಮ ಮುನ್ನಡೆ ಕಾಯ್ದುಕೊಂಡು ಗೆದ್ದ ರಾಜ್ಯದ ತಂಡಗಳು ನಾಳೆಯ ಪಂದ್ಯಗಳ ಯಶಸ್ಸಿಗೆ ಶತಪ್ರಯತ್ನ ನಡೆಸುತ್ತಿವೆ.ಕ್ವಾರ್ಟರ್ ಫೈನಲ್‌ನ ಬಾಲಕರ ವಿಭಾಗದಲ್ಲಿ ರಾಜ್ಯದ ತಂಡವು 31-06 ಗೋಲುಗಳಿಂದ ಮಧ್ಯಪ್ರದೇಶದ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲೇ ತನ್ನ ಗೆಲುವಿನ ನಡೆಯಲ್ಲಿ ರಾಜ್ಯದ ತಂಡವು 20-01ರ ಅಂತರ ಕಾಯ್ದುಕೊಂಡಿತ್ತು. ಬಾಲಕಿಯರ ತಂಡದವರು 20-10ರಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಮೊದಲಾರ್ಧದಲ್ಲಿ 17-05ರ ಅಂತರ ಕಾಯ್ದುಕೊಂಡ ಬಾಲಕಿಯರು ಎದುರಾಳಿಯನ್ನು ಸುಲಭವಾಗಿ ಮಣಿಸಿದರು.ಬಾಲಕರ ವಿಭಾಗದಲ್ಲಿ ಛತ್ತೀಸ್‌ಗಡ ತಂಡವು 37-21ರಿಂದ ಉತ್ತರಪ್ರದೇಶವನ್ನು ಮಣಿಸಿತು. ದೆಹಲಿ ತಂಡವು 27-25ರಲ್ಲಿ ಹರಿಯಾಣ ತಂಡವನ್ನು ಸೋಲಿಸಿತು.  ಪಂಜಾಬ್ ತಂಡವು ಮಹಾರಾಷ್ಟ್ರದ ವಿರುದ್ಧ 32-09ರಲ್ಲಿ ಗೆಲುವು ಸಾಧಿಸಿತು.ಬಾಲಕಿಯರ ವಿಭಾಗದಲ್ಲಿ ಛತ್ತೀಸ್‌ಗಡವು ಆಂಧ್ರಪ್ರದೇಶವನ್ನು 27-03ರಲ್ಲಿ ಸೋಲಿಸಿತು.  ಹರಿಯಾಣವು ಮಹಾರಾಷ್ಟ್ರದ ವಿರುದ್ಧ 30-27ರಲ್ಲಿ ಗೆಲುವು ಸಾಧಿಸಿತು.  ಪಂಜಾಬ್ ತಂಡವು ತಮಿಳುನಾಡು ವಿರುದ್ಧ 34-08ರಲ್ಲಿ ಗೆದ್ದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry