ಸೆಮಿಫೈನಲ್‌ಗೆ ಕೆಎಸ್‌ಪಿ, ವಿಜಯ ಬ್ಯಾಂಕ್ ತಂಡಗಳು

7

ಸೆಮಿಫೈನಲ್‌ಗೆ ಕೆಎಸ್‌ಪಿ, ವಿಜಯ ಬ್ಯಾಂಕ್ ತಂಡಗಳು

Published:
Updated:
ಸೆಮಿಫೈನಲ್‌ಗೆ ಕೆಎಸ್‌ಪಿ, ವಿಜಯ ಬ್ಯಾಂಕ್ ತಂಡಗಳು

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡ ಹಾಗೂ ವಿಜಯ ಬ್ಯಾಂಕ್ ತಂಡಗಳು ಇಲ್ಲಿ ನಡೆಯುತ್ತಿರುವ ವಿಜಯ ಬ್ಯಾಂಕ್ ಆಶ್ರಯದ ಹೊನಲು ಬೆಳಕಿನ ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶನಿವಾರ ಕೆಎಸ್‌ಪಿ ತಂಡ 18-13 ಪಾಯಿಂಟ್‌ಗಳಿಂದ ಹಿಂದೂಸ್ತಾನ್ ಏರೋನಾಟಿಕ್ಸ್   ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡವನ್ನು ಸೋಲಿಸಿತು.

ಮೊದಲಾರ್ಧದ ವೇಳೆಗೆ ಉಭಯ ತಂಡಗಳು ತಲಾ ಒಂಬತ್ತು ಪಾಯಿಂಟ್ ಕಲೆ ಹಾಕಿದ್ದವು. ಲೀಗ್ ಹಂತದ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಕೆಎಸ್‌ಪಿ ಕ್ವಾರ್ಟರ್ ಫೈನಲ್‌ನಲ್ಲೂ ತಮ್ಮ `ಬಲ~ವನ್ನು ತೋರಿಸಿತು.ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ವಿಜಯ ಬ್ಯಾಂಕ್ 47-45ರಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ತಂಡವನ್ನು ಸೋಲಿಸಿತು. ಅತ್ಯಂತ ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಬ್ಯಾಂಕ್ ತಂಡ ಮೊದಲಾರ್ಧದಲ್ಲಿ 24 ಪಾಯಿಂಟ್ಸ್ ಗಳಿಸಿದ್ದರೆ, ಎಂಇಜಿ 20 ಗಳಿಸಿತ್ತು.ಮೊದಲಾರ್ಧ ಅಂತ್ಯ ಕಂಡಾಗ ಕೇವಲ ನಾಲ್ಕು ಪಾಯಿಂಟ್ಸ್ ಹಿನ್ನಡೆ ಅನುಭವಿಸಿದ್ದ ಎಂಇಜಿ ದ್ವಿತೀಯಾರ್ಧದಲ್ಲಿ ಭಾರೀ ಪೈಪೋಟಿ ತೋರಿತು. ಇದಕ್ಕೂ ಮುನ್ನ ನಡೆದ ಲೀಗ್ ಪಂದ್ಯದಲ್ಲಿ ವಿಜಯ ಬ್ಯಾಂಕ್  ತಂಡ 36-14 ಪಾಯಿಂಟ್ಸ್‌ನಿಂದ ಕೆಪಿಟಿಸಿಎಲ್ ಎದುರು ಜಯ ಸಾಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry