ಮಂಗಳವಾರ, ಜೂನ್ 22, 2021
29 °C
ಜೂನಿಯರ್ ಮಹಿಳಾ ರಾಷ್ಟ್ರೀಯ ಹಾಕಿ

ಸೆಮಿಫೈನಲ್‌ಗೆ ಕೇರಳ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಕೇರಳ ಮತ್ತು ಗಂಗಾಪುರ ಒಡಿಶಾ ತಂಡಗಳು ಇಲ್ಲಿ ನಡೆಯುತ್ತಿರುವ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಟೂರ್ನಿಯ ಬಿ ಡಿವಿಷನ್‌ನಲ್ಲಿ ಸೋಮವಾರ ಸೆಮಿಫೈನಲ್‌ ತಲುಪಿದವು. ಚಾಮುಂಡಿ ವಿಹಾರದ ಆಸ್ಟ್ರೋ ಟರ್ಫ್‌ ಅಂಕಣದಲ್ಲಿ ನಡೆಯುತ್ತಿರುವ ಟೂರ್ನಿಯ 6ನೇ ದಿನವಾದ ಸೋಮವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಕೇರಳ ತಂಡವು 9–0 (3–0)ಯಿಂದ ಪುದುಚೇರಿ ವಿರುದ್ಧ ಜಯ ಗಳಿಸಿತು.ಪಂದ್ಯದ ಮೂರನೇ ನಿಮಿಷದಲ್ಲಿಯೇ ತಂಡದ ಗೋಲಿನ ಖಾತೆ ತೆರೆದ ಅಮಲಾ ಥಾಮಸ್  46 ಮತ್ತು 54ನೇ ನಿಮಿಷಗಳಲ್ಲಿಯೂ ಗೋಲು ಗಳಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಮುನ್ಪಡೆ ಆಟಗಾರ್ತಿ ಅಪರ್ಣಾ ಜಾಯ್ (10ನಿ), ಕೆ. ಪ್ರತೀಶಾ (40ನಿ) ವಿನಯಾ ಅತಿಯಾದತ್ (32ನಿ, 42ನಿ) ಕೆ. ಮೃದುಲಾರಾಜ್ (67ನಿ), ಎಂ.ಆರ್. ಸಿಂಧು (69ನಿ)  ಗೋಲು ಹೊಡೆದು ತಂಡಕ್ಕೆ ಭರ್ಜರಿ ಗೆಲುವಿನ ಕಾಣಿಕೆ ನೀಡಿದರು.ಗಂಗಾಪುರಕ್ಕೆ ಜಯ: ಇನ್ನೊಂದು ಪಂದ್ಯದಲ್ಲಿ  ರಿಂಕಿ ಕುಜೂರು ಮತ್ತು ಜನಾಬಿ ಪ್ರಧಾನ್ ತಂದಿತ್ತ ಗೋಲುಗಳ ನೆರವಿನಿಂದ ಗಂಗಾಪುರ ಒಡಿಶಾ ತಂಡವು 8–1 (3–0) ರಿಂದ ಅಸ್ಸಾಂ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿತು. ರಿಂಕಿ ಕುಜೂರು (18ನಿ, 40ನಿ), ಜನಾಬಿ (21ನಿ, 31ನಿ) ಎರಡು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ನೀಡಿದರು.ಅಸ್ಸಾಂ ತಂಡದ ಮ್ಯಾಕ್ಸಿಮಾ ಅಲೆಕ್ಸೊ 46ನೇ ನಿಮಿಷದಲ್ಲಿ ಒಂದು ಗೋಲು ಹೊಡೆಯುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ರಜಿತಾ ಟಿರ್ಕಿ (65ನಿ), ಸುಶಾಂತ್ ಮಿಂಜ್ (69ನಿ) ಗೋಲು ಗಳಿಸುವ ಮೂಲಕ ಗಂಗಾಪುರ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತರು.ಆಂಧ್ರಕ್ಕೆ ಜಯ: ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಆಂಧ್ರ ತಂಡವು 6–0 (2–0)ಗೋಲುಗಳಿಂದ ಜಮ್ಮು ಮತ್ತು ಕಾಶ್ಮೀರವನ್ನು ಸೋಲಿಸಿತು. ಜ್ಯೋತಿ ಪಿಳಿಗುಳ (17ನಿ) ತಂಡದ ಗೋಲಿನ ಖಾತೆ ತೆರೆದರು. ನಂತರ ಮಹೇಶ್ವರಿ ಬಳಗೊಂಡ (33ನಿ, 54ನಿ, 66ನಿ)  ಮೂರು ಗೋಲು ಗಳಿಸಿದರೆ, ಜ್ಯೋತಿ ಉಂದಾಬಂಡ (56ನಿ, 60ನಿ) ಎರಡು ಗೋಲು ಗಳಿಸಿ ತಂಡದ ಜಯಕ್ಕೆ ಕಾಣಿಕೆ ನೀಡಿದರು.’ಬಿ’ ಡಿವಿಷನ್‌ನಲ್ಲಿ ಎಲ್ಲ ಪಂದ್ಯಗಳನ್ನೂ ಗೆದ್ದಿರುವ ಮಣಿಪುರ ಮತ್ತು ಛತ್ತೀಸಗಡ ಈಗಾಗಲೇ ನಾಲ್ಕರ ಘಟ್ಟಕ್ಕೆ ತಲುಪಿವೆ. ಮಂಗಳವಾರ ವಿಶ್ರಾಂತಿ ದಿನವಾಗಿದ್ದು, ಬುಧವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.