ಸೆಮಿಫೈನಲ್‌ಗೆ ಡೆಲ್‌ ಪೊಟ್ರೊ

7

ಸೆಮಿಫೈನಲ್‌ಗೆ ಡೆಲ್‌ ಪೊಟ್ರೊ

Published:
Updated:

ಸಿಡ್ನಿ (ರಾಯಿಟರ್ಸ್‌): ಅರ್ಜೆಂಟೀ ನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಇಲ್ಲಿ ನಡೆಯುತ್ತಿರುವ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಪೊಟ್ರೊ 6-4, 3-6, 6-3 ರಲ್ಲಿ ಜೆಕ್‌ ಗಣರಾಜ್ಯದ ರಾಡೆಕ್ ಸ್ಟೆಪನೆಕ್‌ ವಿರುದ್ಧ ಗೆದ್ದರು.ಪೊಟ್ರೊ ನಾಲ್ಕರಘಟ್ಟದ ಪಂದ್ಯದಲ್ಲಿ ರಷ್ಯಾದ ದಿಮಿತ್ರಿ ತುರ್ಸುನೊವ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ದಿನದ ಮತ್ತೊಂದು ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ದಿಮಿತ್ರಿ 7-6, 6-2 ರಲ್ಲಿ ಉಜ್ಬೆಕಿಸ್ತಾನದ ಡೆನಿಸ್‌ ಇಸ್ತೊಮಿನ್‌ ವಿರುದ್ಧ ಗೆದ್ದರು.ಉಕ್ರೇನ್‌ನ ಸೆರ್ಜಿ ಸ್ಟಕೋವ್‌ಸ್ಕಿ 6-4, 6-3 ರಲ್ಲಿ ಆಸ್ಟ್ರೇಲಿಯಾದ ಮರಿಂಕೊ ಮಟೊಸೆವಿಕ್‌ ಎದುರೂ, ಬರ್ನಾರ್ಡ್‌ ಟೊಮಿಕ್‌ 6-4, 6-3 ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್‌ ದೊಗೊಪೊಲೊವ್‌ ಮೇಲೂ ಜಯ ಸಾಧಿಸಿದರು.ಫೈನಲ್‌ಗೆ ಕೆರ್ಬರ್‌: ಜರ್ಮನಿಯ ಏಂಜೆಲಿಕ್‌ ಕೆರ್ಬರ್‌ ಮತ್ತು ಬಲ್ಗೇರಿಯದ ಸ್ವೆಟಾನಾ ಪಿರೊಕೋವಾ ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry