ಸೆಮಿಫೈನಲ್ಗೆ ನಿಖಿಲ್ ಶ್ಯಾಮ್
ಬೆಂಗಳೂರು: ಅಗ್ರ ಶ್ರೇಯಾಂಕದ ನಿಖಿತ್ ಲಕ್ಷ್ಮಣ್ ಅವರನ್ನು ಮಣಿಸಿದ ಎನ್ಜಿವಿ ಕ್ಲಬ್ನ ನಿಖಿಲ್ಶ್ಯಾಮ್ ಶ್ರೀರಾಮ್ ಇಲ್ಲಿ ನಡೆಯತ್ತಿರುವ ಸನ್ಲೈಟ್ಸ್ ಫೈವ್ ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 15 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಖಿಲ್ಶ್ಯಾಮ್ 25-15, 21-17ರಲ್ಲಿ ಡಬ್ಲ್ಯುಪಿಬಿಎ ಕ್ಲಬ್ನ ನಿಖಿತ್ ಎದುರು ಗೆಲುವು ಪಡೆದರು. ಇದೇ ವಿಭಾಗದ ಇತರ ಎಂಟರ ಘಟ್ಟದ ಪಂದ್ಯಗಳಲ್ಲಿ ಕೆ. ಅಭಿರಾಮ್ 21-12, 21-12ರಲ್ಲಿ ಎನ್. ಶ್ರೀಹರಿ ಗುಪ್ತಾ ಮೇಲೂ, ಸೈಫ್ ಅಲಿ 22-20, 21-16ರಲ್ಲಿ ಸಮೀರ್ ಸುಭೇದಾರ್ ವಿರುದ್ಧವೂ, ಎಸ್. ಅಕ್ಷಯ್ ಶ್ರೀನಿವಾಸ್ 21-10, 21-9ರಲ್ಲಿ ಸಾಕೇತ್ ಉಪಾಧ್ಯ ಮೇಲೂ ಗೆಲುವು ಪಡೆದು ನಾಲ್ಕರ ಘಟ್ಟ ತಲುಪಿದರು.
ಅರ್ಚನಾ ಜೋಡಿಗೆ ಪ್ರಶಸ್ತಿ: 15 ವರ್ಷದೊಳಗಿನವರ ಬಾಲಕಿಯರ ವಿಭಾಗ ಡಬಲ್ಸ್ನಲ್ಲಿ ಅರ್ಚನಾ ಪೈ ಹಾಗೂ ರೇಣು ತಿರುಮಲ ಚಾಂಪಿಯನ್ ಆದರು. ಈ ಜೋಡಿ ಫೈನಲ್ ಪಂದ್ಯದಲ್ಲಿ 21-9, 21-18ರಲ್ಲಿ ಭವ್ಯಾ ಕೃಷ್ಣನ್-ಬಿ. ಮಾಳವಿಕಾ ಅವರನ್ನು ಸೋಲಿಸಿತು.
13 ವರ್ಷದೊಳಗಿನವರ ವಿಭಾಗದ ಫೈನಲ್ ಪಂದ್ಯದಲ್ಲಿ ಅಜಿಂಕ್ಯ ಜೋಶಿ-ಬೆಳಗಾವಿಯ ತೇಜಸ್ ಸಂಜಯ್ 21-16, 21-12ರಲ್ಲಿ ಕಾರ್ತಿಕ್-ಸಿ.ಎಸ್. ಸಾಕೇತ್ ಎದುರು ಜಯ ಪಡೆದು ಚಾಂಪಿಯನ್ ಆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.