ಗುರುವಾರ , ಆಗಸ್ಟ್ 22, 2019
22 °C
ರಾಜ್ಯ ಸಿ ಡಿವಿಷನ್ ಫುಟ್‌ಬಾಲ್

ಸೆಮಿಫೈನಲ್‌ಗೆ ಬೆಂಗಳೂರು ರೆಡ್ಸ್

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ರೆಡ್ಸ್ ಹಾಗೂ ಬೆಂಗಳೂರು ವಾರಿಯರ್ಸ್‌ ತಂಡಗಳು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ನಾಕೌಟ್ ಹಂತದಲ್ಲಿ ಗೆದ್ದು ಸೋಮವಾರ ಸೆಮಿಫೈನಲ್ ಪ್ರವೇಶಿಸಿವೆ.ಅಶೋಕ್ ನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರೆಡ್ಸ್ ತಂಡ 3-0 ಗೋಲುಗಳಿಂದ ಬ್ಲಿಟ್ಜ್ ತಂಡವನ್ನು ಮಣಿಸಿತು. ವಿಜಯಿ ತಂಡದ ಪರ ಆಕಾಶ್ (22ನೇ ನಿ.), ರೊನಾಲ್ಡ್ (31ನೇ ನಿ.) ಹಾಗೂ ರಾಹುಲ್ (39ನೇ ನಿ.) ಗೋಲು ತಂದಿತ್ತರು.ದಿನದ ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್ ಯೂತ್ಸ್ ತಂಡ 1-3ರಲ್ಲಿ ಬೆಂಗಳೂರು ವಾರಿಯರ್ಸ್‌ ಕೈಯಲ್ಲಿ ಸೋಲು ಕಂಡಿತು. ವಿಜಯಿ ತಂಡದ ಪರ ಭಾರತಿದಾಸನ್ (44ನೇ ನಿ.) ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದರು. ಬಳಿಕ ಅರುಣ್ (46ನೇ ನಿ.) ಹಾಗೂ ಜಾನ್ (55ನೇ ನಿ.) ಗೋಲು ತಂದಿತ್ತರು. ಸ್ಪೋರ್ಟಿಂಗ್ ಯೂತ್ಸ್ ಪರ ಪ್ರೇಮ್ (26ನೇ ನಿ.) ಏಕೈಕ ಗೋಲು ಗಳಿಸಿದರು.ಮಂಗಳವಾರ ವಿರಾಮದ ದಿನವಾಗಿದೆ. ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಬೆಂಗಳೂರು ರೆಡ್ಸ್-ಇನ್‌ಕಮ್‌ಟ್ಯಾಕ್ಸ್ ಹಾಗೂ ಬೆಂಗಳೂರು ಈಗಲ್ಸ್-ಬೆಂಗಳೂರು ವಾರಿಯರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

Post Comments (+)