ಶನಿವಾರ, ಏಪ್ರಿಲ್ 17, 2021
32 °C

ಸೆಮಿಫೈನಲ್‌ಗೆ ಬೋಲ್ಟ್, ಬ್ಲೇಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಜಮೈಕದ ಉಸೇನ್ ಬೋಲ್ಟ್ ಪುರುಷರ 200 ಮೀ. ಓಟದ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಮಂಗಳವಾರ ನಡೆದ ಹೀಟ್ಸ್‌ನಲ್ಲಿ ಅವರು 20.39 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮಾತ್ರವಲ್ಲ ಎಂಟು ಸ್ಪರ್ಧಿಗಳಿದ್ದ ಮೊದಲ ಹೀಟ್ಸ್‌ನ್ನು ಗೆದ್ದುಕೊಂಡರು. ಈಗಾಗಲೇ 100 ಮೀ. ಓಟದಲ್ಲಿ ಚಿನ್ನ ಜಯಿಸಿರುವ ಬೋಲ್ಟ್ ಬೀಜಿಂಗ್ ಒಲಿಂಪಿಕ್ ಕೂಟದ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ. ಬೀಜಿಂಗ್‌ನಲ್ಲಿ ಅವರು 100 ಹಾಗೂ 200 ಮೀ. ಓಟದಲ್ಲಿ ಸ್ವರ್ಣ ಜಯಿಸಿದ್ದರು.

`200 ಮೀ. ಸ್ಪರ್ಧೆಯಲ್ಲೂ ಚಿನ್ನ ಗೆದ್ದು ಜೀವಂತ ದಂತಕತೆಯಾಗಬೇಕೆಂಬುದು ನನ್ನ ಗುರಿ~ ಎಂದು ಭಾನುವಾರ 100 ಮೀ. ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಬಳಿಕ ಬೋಲ್ಟ್ ನುಡಿದಿದ್ದರು. ಮಂಗಳವಾರ ನಡೆದ ಹೀಟ್ಸ್ ನಲ್ಲಿ ಅಗ್ರಸ್ಥಾನ ಖಚಿತವಾದ ಬಳಿಕ ಬೋಲ್ಟ್ ತಮ್ಮ ವೇಗವನ್ನು ತಗ್ಗಿಸಿದರು. ಬೋಲ್ಟ್‌ಗೆ ಇಲ್ಲೂ ಸವಾಲಾಗಿ ಪರಿಣಮಿಸಲಿರುವ ಜಮೈಕದ ಯೋಹಾನ್ ಬ್ಲೇಕ್ ಕೂಡಾ ಹೆಚ್ಚಿನ ಪ್ರಯಾಸವಿಲ್ಲದೆ, ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ನಾಲ್ಕನೇ ಹೀಟ್ಸ್‌ನಲ್ಲಿ ಓಡಿದ ಅವರು 20.38 ಸೆ. ಗಳಲ್ಲಿ ಗುರಿತಲುಪಿ ಅಗ್ರಸ್ಥಾನ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.