ಶನಿವಾರ, ಮೇ 15, 2021
25 °C
ಟೆನಿಸ್

ಸೆಮಿಫೈನಲ್‌ಗೆ ಭೂಪತಿ-ಬೋಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಜೋಡಿ ಇಲ್ಲಿ ನಡೆಯುತ್ತಿರುವ ಎಜೋನ್ ಟೆನಿಸ್ ಟೂರ್ನಿಯ  ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.ಮೂರನೇ ಶ್ರೇಯಾಂಕದ ಭಾರತದ ಆಟಗಾರರು 1ಗಂಟೆ 32 ನಿಮಿಷಗಳ ಹೋರಾಟದಲ್ಲಿ, 7-6, 4-6, 10-4 ರಲ್ಲಿ ಐದನೇ ಶ್ರೇಯಾಂಕದ ಕಾಲಿನ್ ಫ್ಲೆಮಿಂಗ್ ಹಾಗೂ ಜೊನಾಥನ್ ಮರ್ರೆ ಅವರನ್ನು ಸೋಲಿಸಿದರು.ಸೆಮಿಫೈನಲ್‌ನಲ್ಲಿ ಭಾರತದ ಜೋಡಿ, ಅಗ್ರ ಶೇಯಾಂಕದ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯಾನ್ ಸಹೋದರರನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.