ಸೆಮಿಫೈನಲ್‌ಗೆ ಮಂಗಳೂರು, ಮೈಸೂರು

7

ಸೆಮಿಫೈನಲ್‌ಗೆ ಮಂಗಳೂರು, ಮೈಸೂರು

Published:
Updated:
ಸೆಮಿಫೈನಲ್‌ಗೆ ಮಂಗಳೂರು, ಮೈಸೂರು

ಬೆಳಗಾವಿ:  ಬೆಂಗಳೂರು ದಕ್ಷಿಣ, ಮಂಗಳೂರು ಹಾಗೂ ಮೈಸೂರು ಜಿಲ್ಲೆಯ ಮಹಿಳಾ ತಂಡಗಳು ಇಲ್ಲಿ ಶನಿವಾರ ಆರಂಭಗೊಂಡ  ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡವು.

ಅಂಜುಮನ್ ಪದವಿ ಪೂರ್ವ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಬೆಂಗಳೂರು ದಕ್ಷಿಣ ತಂಡದವರು 2-0 ಗೋಲುಗಳಿಂದ ಬೆಂಗಳೂರು ಉತ್ತರ ತಂಡವನ್ನು ಮಣಿಸಿದರು. ಮಂಗಳೂರು ತಂಡದವರು 3-0 ಗೋಲುಗಳಿಂದ ಉಡುಪಿ ತಂಡವನ್ನು ಮಣಿಸಿದರು. ಬೆಳಗಾವಿ ಹಾಗೂ ಮೈಸೂರು ತಂಡಗಳ ಪಂದ್ಯದ ಫಲಿತಾಂಶಕ್ಕಾಗಿ ಪೆನಾಲ್ಟಿ ಮೊರೆ ಹೋಗಿದ್ದು, ಮೈಸೂರು 4-3 ಗೋಲುಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಪುರುಷರ ವಿಭಾಗದ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಮಂಗಳೂರು ತಂಡದವರು 6-0 ಗೋಲುಗಳಿಂದ  ಬೆಂಗಳೂರು ಗ್ರಾಮೀಣ ತಂಡವನ್ನು ಸೋಲಿಸಿದರು. ಬೆಳಗಾವಿ ತಂಡ 3-0 ಗೋಲುಗಳಿಂದ ಬೀದರ್ ವಿರುದ್ಧ ಜಯ ಸಾಧಿಸಿತು. ಚಿತ್ರದುರ್ಗ ತಂಡ 4-2 ಗೋಲುಗಳಿಂದ ಚಾಮರಾಜನಗರ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry