ಸೆಮಿಫೈನಲ್‌ಗೆ ಸಾನಿಯಾ-ನೂರಿಯಾ

7

ಸೆಮಿಫೈನಲ್‌ಗೆ ಸಾನಿಯಾ-ನೂರಿಯಾ

Published:
Updated:

ಬೀಜಿಂಗ್ (ಪಿಟಿಐ): ಸಾನಿಯಾ ಮಿರ್ಜಾ ಹಾಗೂ ಅವರ ಜೊತೆಗಾರ್ತಿ ನೂರಿಯಾ ಲಗೊಸ್ತೆರಾ ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.



ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾನಿಯಾ-ನೂರಿಯಾ 4-6, 6-4, 16-14ರಲ್ಲಿ ಜರ್ಮನಿಯ ಜೂಲಿಯಾ ಜಾರ್ಜಸ್ ಹಾಗೂ ಜೆಕ್ ಗಣರಾಜ್ಯದ ಬಾರ್ಬೊರಾ ಜಾಹ್ಲಾವೊವಾ ಅವರನ್ನು ಪರಾಭವಗೊಳಿಸಿದರು.



ಈ ಪೈಪೋಟಿ ತುಂಬಾ ಕುತೂಹಲ ಮೂಡಿಸುತ್ತಾ ಸಾಗಿತು. ಮೊದಲ ಸೆಟ್‌ನಲ್ಲಿ ಸೋಲುಕಂಡ ಭಾರತ-ಸ್ಪೇನ್ ಜೋಡಿ ಮತ್ತೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅವರು 6-3, 6-0ರಲ್ಲಿ ಚೀನಾದ ಮಾವೊ ಕ್ಸಿನ್ ಗಾಂಗ್ ಹಾಗೂ ಜಾಂಗ್ ಜೀ ಎದುರು ಗೆದ್ದರು.



ಎರಡನೇ ಸುತ್ತಿಗೆ ಪೇಸ್: ಟೋಕಿಯೊದಲ್ಲಿ ನಡೆಯುತ್ತಿರುವ ಎಟಿಪಿ ಜಪಾನ್ ಓಪನ್ ಟೂರ್ನಿಯ ಡಬಲ್ಸ್ ನಲ್ಲಿ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಅವರು 6-4, 6-4ರಲ್ಲಿ ಸ್ಲೊವಾಕಿಯಾದ ಫಿಲಿಪ್ ಪೊಲಾಸೆಕ್ ಹಾಗೂ ಆಸ್ಟ್ರಿಯದ ಜೂಲಿಯನ್ ನೋಲ್ಸ್ ಎದುರು ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry