ಸೆಮಿಫೈನಲ್‌ಗೆ ಸಿಡ್ನಿ ಸಿಕ್ಸರ್ಸ್‌

7

ಸೆಮಿಫೈನಲ್‌ಗೆ ಸಿಡ್ನಿ ಸಿಕ್ಸರ್ಸ್‌

Published:
Updated:

ಕೇಪ್‌ಟೌನ್ (ಪಿಟಿಐ): ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಶೇನ್ ವಾಟನ್ಸ್ ಅವರ ಅದ್ಭುತ ಫಾರ್ಮ್ ಮುಂದುವರಿದಿದೆ. ಅವರ ಆಲ್‌ರೌಂಡ್ ಆಟದ ನೆರವಿನಿಂದ ಹೈವೆಲ್ಡ್ ಲಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಸಿಡ್ನಿ ಸಿಕ್ಸರ್ಸ್‌ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ಲಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 137 ರನ್ ಪೇರಿಸಿತು. ಸಿಡ್ನಿ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 141 ರನ್ ಗಳಿಸಿ ಗೆಲುವು ಪಡೆಯಿತು. ಸತತ ಮೂರನೇ ಜಯ ಸಾಧಿಸಿದ ಸಿಡ್ನಿ 12 ಪಾಯಿಂಟ್‌ಗಳೊಂದಿಗೆ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.ಸಾಧಾರಣ ಗುರಿ ಬೆನ್ನಟ್ಟಿದ ಸಿಡ್ನಿ ತಂಡದ ಪರ ವಾಟ್ಸನ್ (47, 38 ಎಸೆತ, 4 ಬೌಂ, 3 ಸಿಕ್ಸರ್) ಮತ್ತು ಬ್ರಾಡ್ ಹಡಿನ್ (32) ಉತ್ತಮ ಪ್ರದರ್ಶನ ನೀಡಿದ್ದರು. ಬೌಲಿಂಗ್‌ನಲ್ಲೂ ಮಿಂಚಿದ್ದ ವಾಟ್ಸನ್ 25 ರನ್‌ಗಳಿಗೆ ಎರಡು ವಿಕೆಟ್ ಪಡೆದಿದ್ದರು.ಸಂಕ್ಷಿಪ್ತ ಸ್ಕೋರ್: ಹೈವೆಲ್ಡ್ ಲಯನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 137 (ಗುಲಾಮ್ ಬೋದಿ 61, ನೀಲ್ ಮೆಕೆಂಜಿ 17, ಜೀನ್ ಸೈಮ್ಸ 23, ಮಿಷೆಲ್ ಸ್ಟಾರ್ಕ್ 19ಕ್ಕೆ 3, ಜೋಶ್ ಹಜ್ಲೆವುಡ್ 18ಕ್ಕೆ 2, ಶೇನ್ ವಾಟ್ಸನ್ 25ಕ್ಕೆ 2). ಸಿಡ್ನಿ ಸಿಕ್ಸರ್ಸ್‌: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 141 (ಮೈಕಲ್ ಲಂಬ್ 22, ಶೇನ್ ವಾಟ್ಸನ್ 47, ಬ್ರಾಡ್ ಹಡಿನ್ 32, ಸ್ಟೀವನ್ ಸ್ಮಿತ್ ಔಟಾಗದೆ 25, ಆರನ್ ಫಾಂಗಿಸೊ 14ಕ್ಕೆ 3, ಡಿರ್ಕ್ ನಾನೆಸ್ 16ಕ್ಕೆ 1) ಫಲಿತಾಂಶ: ಸಿಡ್ನಿ ಸಿಕ್ಸರ್ಸ್‌ಗೆ 5 ವಿಕೆಟ್ ಜಯ, ಪಂದ್ಯಶ್ರೇಷ್ಠ: ಮಿಷೆಲ್ ಸ್ಟಾರ್ಕ್ಇಂದಿನ ಪಂದ್ಯಗಳು


ಡೆಲ್ಲಿ ಡೇರ್‌ಡೆವಿಲ್ಸ್-

ಆಕ್ಲೆಂಡ್ ಏಸಸ್

ಆರಂಭ: ರಾತ್ರಿ 9.00ಕ್ಕೆ

ಸ್ಥಳ: ಡರ್ಬನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry