ಸೋಮವಾರ, ಅಕ್ಟೋಬರ್ 14, 2019
22 °C

ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಸೈನಾ

Published:
Updated:

ನವದೆಹಲಿ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಮಲೇಷ್ಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ನಿರಾಸೆ ಹೊಂದಿ ನಿರ್ಗಮಿಸಿದರು.ಕ್ವಾಲಾಲಂಪುರದಲ್ಲಿ ನಡೆಯುತ್ತಿರುವ ಈ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಶನಿವಾರ ಸೈನಾ 15-21, 16-21ರಲ್ಲಿ ವಿಶ್ವ ಅಗ್ರ ಕ್ರಮಾಂಕದ ಆಟಗಾರ್ತಿ ಚೀನಾದ ಯಿಹಾನ್ ವಾಂಗ್ ಎದುರು ಸೋಲನುಭವಿಸಿದರು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ.ಕೇವಲ 41 ನಿಮಿಷಗಳಲ್ಲಿಯೇ ಕೊನೆಗೊಂಡ ಪಂದ್ಯದಲ್ಲಿ ಸೈನಾ ಪ್ರಬಲ ಪ್ರತಿಯೋಧ ನೀಡುವಷ್ಟು ಚುರುಕಾಗಿ ಆಡಲೇ ಇಲ್ಲ. ವಿಶ್ವ ರ‌್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದ ಬ್ಯಾಡ್ಮಿಂಟನ್ ತಾರೆಯು ಕ್ವಾರ್ಟರ್ ಫೈನಲ್‌ವರೆಗೆ ನಿರೀಕ್ಷಿತ ಫಲಿತಾಂಶ ಪಡೆಯುವುದು ಕಷ್ಟವಾಗಿರಲಿಲ್ಲ.ವಾಂಗ್ ಅವರಷ್ಟು ಮಿಂಚಿನ ವೇಗದಿಂದ ಮುನ್ನುಗ್ಗಿ ಸ್ಮಾಷ್ ಮಾಡುವುದು ಸೈನಾಗೆ ಸಾಧ್ಯವಾಗಲಿಲ್ಲ. ವಾಂಗ್ ಹದಿನಾರು ಬಾರಿ ಇಂಥ ಅದ್ಭುತ ಹೊಡೆತ ಪ್ರಯೋಗಿಸಿದರು. ಆದರೆ ಸೈನಾ ಹೀಗೆ ಎದುರಾಳಿ ಅಂಗಳದಲ್ಲಿ ಶಟ್ಲ್ ಅಪ್ಪಳಿಸಿದ್ದು ಕೇವಲ ಹನ್ನೊಂದು ಸಾರಿ.

Post Comments (+)