ಸೆಮಿಫೈನಲ್ ತಲುಪಲು ಆಸ್ಟ್ರೇಲಿಯಾ ಸಮರ್ಥ

7

ಸೆಮಿಫೈನಲ್ ತಲುಪಲು ಆಸ್ಟ್ರೇಲಿಯಾ ಸಮರ್ಥ

Published:
Updated:

ನವದೆಹಲಿ (ಪಿಟಿಐ):ಆಸ್ಟ್ರೇಲಿಯಾ ಸತತ ನಾಲ್ಕನೇ ಬಾರಿ ಚಾಂಪಿಯನ್ ಆಗುತ್ತದೆಂದು ಪೂರ್ಣ ಭರವಸೆ ವ್ಯಕ್ತಪಡಿಸುವುದು ಕಷ್ಟ.ಆದರೆ ಸೆಮಿಫೈನಲ್ ತಲುಪಲು ಸಮರ್ಥವಾಗಿದೆ.ಹೀಗೆ ಹೇಳಿರುವುದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್.ಈ ಬಾರಿಯೂ ರಿಕಿ ಪಾಂಟಿಂಗ್ ನಾಯಕತ್ವದ ತಂಡವು ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯುತ್ತದೆ ಎಂದು ವಿಶ್ವಾಸದಿಂದ ಹೇಳಬಹುದು.ಮತ್ತೊಮ್ಮೆ ವಿಶ್ವಕಪ್ ಗೆಲುವಿನ ಅದೃಷ್ಟ ತಂಡಕ್ಕಿದೆ ಎನ್ನುವ ಧೈರ್ಯ ಮಾತ್ರ ನನಗಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.‘ಸೆಮಿಫೈನಲ್ ತಲುಪುವ ಮಟ್ಟದಲ್ಲಿ ಆಡುವುದು ಅಗತ್ಯ.ಒಮ್ಮೆ ಈ ಹಂತ ವನ್ನು ದಾಟಿದರೆ,ಕೊನೆಯಲ್ಲಿ ಮತ್ತೊಂದು ಯಶಸ್ಸಿನ ಹೆಜ್ಜೆ ಇಡುವಂಥ ಪ್ರದರ್ಶನವನ್ನು ತಂಡ ನೀಡುತ್ತದೆಂದು ಲೆಕ್ಕಾಚಾರ ಮಾಡಬಹುದು.ಅಲ್ಲಿಯ ವರೆಗೆ ಕಾಯಬೇಕು’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನ ದಲ್ಲಿ ಇಯಾನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry