ಸೆಮಿಫೈನಲ್ ಪ್ರವೇಶಿಸಿದ ಶ್ರೀಲಂಕಾ ತಂಡ

7

ಸೆಮಿಫೈನಲ್ ಪ್ರವೇಶಿಸಿದ ಶ್ರೀಲಂಕಾ ತಂಡ

Published:
Updated:

ಪಳ್ಳೆಕೆಲೆ (ಪಿಟಿಐ): ಲಸಿತ್ ಮಾಲಿಂಗ (31ಕ್ಕೆ 5) ಮತ್ತು ಮಾಹೇಲ ಜಯವರ್ಧನೆ (42) ಅವರ ಸೊಗಸಾದ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು. ಹಾಲಿ ಚಾಂಪಿಯನ್ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿತ್ತು.ಪಳ್ಳೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ `ಸೂಪರ್ 8~ ಹಂತದ ಪಂದ್ಯದಲ್ಲಿ ಲಂಕಾ 19 ರನ್‌ಗಳಿಂದ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 ರನ್ ಗಳಿಸಲಷ್ಟೇ ಶಕ್ತವಾಯಿತು.ಲಂಕಾ ಎಲ್ಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ನಾಲ್ಕರಘಟ್ಟ ಪ್ರವೇಶಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಮಾಲಿಂಗ ಅವರ ಮಾರಕ ಬೌಲಿಂಗ್ ಮುಂದೆ ನಲುಗಿತು. 18 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಸಮಿತ್ ಪಟೇಲ್ (67, 48 ಎಸೆತ, 8 ಬೌಂ, 2 ಸಿಕ್ಸರ್) ಮತ್ತು ಗ್ರೇಮ್ ಸ್ವಾನ್ (34) ನಡೆಸಿದ ಪ್ರಯತ್ನ ಸಾಕಾಗಲಿಲ್ಲ.ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಲಂಕಾಕ್ಕೆ ಜಯವರ್ಧನೆ ಹಾಗೂ ದಿಲ್ಶಾನ್ ಉತ್ತಮ ಆರಂಭ ನೀಡಿದರು. ಇವರಿಬ್ಬರು 28 ಎಸೆತಗಳಲ್ಲಿ 35 ರನ್ ಸೇರಿಸಿದರು. ಬಳಿಕ ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ತಿಸ್ಸಾರ ಪೆರೇರಾ ಬಿರುಸಿನ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 (ಮಾಹೇಲ ಜಯವರ್ಧನೆ 42, ತಿಲಕರತ್ನೆ ದಿಲ್ಶಾನ್ 16, ಆ್ಯಂಜೆಲೊ ಮ್ಯಾಥ್ಯೂಸ್ 28, ಜೀವನ್ ಮೆಂಡೀಸ್ 18, ತಿಸ್ಸಾರ ಪೆರೇರಾ ಔಟಾಗದೆ 26; ಸ್ಟುವರ್ಟ್ ಬ್ರಾಡ್ 32ಕ್ಕೆ3, ಗ್ರೇಮ್ ಸ್ವಾನ್ 26ಕ್ಕೆ2). ಇಂಗ್ಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 (ಸಮಿತ್ ಪಟೇಲ್ 67, ಗ್ರೇಮ್ ಸ್ವಾನ್ 34, ಲಸಿತ್ ಮಾಲಿಂಗ 31ಕ್ಕೆ 5, ಅಕಿಲಾ ಧನಂಜಯ 26ಕ್ಕೆ 2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry