ಮಂಗಳವಾರ, ಮೇ 24, 2022
30 °C

ಸೆಮಿಫೈನಲ್ ಪ್ರವೇಶಿಸುವ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಮಾಜಿ ಚಾಂಪಿಯನ್ ಚೆನ್ನೈ ತಂಡದ ಎದುರು ಗೆಲುವು ಪಡೆದಿರುವುದು ವಿಶ್ವಾಸ ಹೆಚ್ಚಿಸಿದೆ. ಸೆಮಿಫೈನಲ್ ಪ್ರವೇಶಿಸುವ ನಂಬಿಕೆ ಇದೆ ಎಂದು ಟ್ರಿನಿಡಾಡ್ ಅಂಡ್ ಟೊಬಾಗೊ ನಾಯಕ ಡರೆನ್ ಗಂಗಾ ಹೇಳಿದರು.`ಮಹಾತ್ಮ ಗಾಂಧಿ ಅವರ ಜನ್ಮದಿನದಂದೇ ಗೆಲುವು ಪಡೆದ ಕಾರಣ ಇದು ನಮ್ಮ ಆಟಗಾರರಿಗೆ ವಿಶೇಷ ದಿನ. ಆದರೆ ಆರಂಭದ ಎರಡೂ ಪಂದ್ಯಗಳಲ್ಲಿ ಸೋಲು ಕಂಡೆವು. ಮುಂಬೈ ಇಂಡಿಯನ್ಸ್ ಎದುರು ಉತ್ತಮ ಬೌಲಿಂಗ್ ಮಾಡಿದೆವು. ಮೊದಲೆರೆದು ಪಂದ್ಯಗಳಲ್ಲಿ ಕೊನೆಯ ಓವರ್‌ನಲ್ಲಿ ಸೋಲು ಕಂಡಿದ್ದು ನಿರಾಸೆ ಮೂಡಿಸಿದೆ. ಒಂದು ಪಂದ್ಯದಲ್ಲಾದರೂ ಗೆಲುವು ಸಾಧ್ಯವಾಗಿದ್ದರೆ, ಸೆಮಿಫೈನಲ್ ಹಾದಿ ಸುಗಮವಾಗಿರುತ್ತಿತ್ತು~ ಎಂದು ಗಂಗಾ ತಿಳಿಸಿದರು.ಭಾನುವಾರ ನಡೆದ ಚಾಂಪಿ ಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ತಂಡವನ್ನು ಗಂಗಾ ಪಡೆ 12 ರನ್‌ಗಳಿಂದ ಸೋಲಿಸಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯುವಲ್ಲಿ ಬೌಲರ್‌ಗಳ ಪಾತ್ರ ಬಹು ಮುಖ್ಯವಾದುದು. ಸುನಿಲ್ ನರೇನ್ ಅತ್ಯುತ್ತಮ ಬೌಲಿಂಗ್ ಮಾಡಿದರು ಎಂದು ಸಂತಸ ವ್ಯಕ್ತಪಡಿಸಿದರು.ಸ್ಯಾಮುಯೆಲ್ ಬದ್ರಿ ಹಾಗೂ ಕೆವೊನ್ ಕೂಪರ್ ಸಹ ಉತ್ತಮ ಸಾಥ್ ನೀಡಿದರು. ಇದರಿಂದ ಮಾಜಿ ಚಾಂಪಿಯನ್‌ರಿಗೆ ೀಲಿನ ರುಚಿ ತೋರಿಸಲು ಸಾಧ್ಯವಾಯಿತು ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.