ಸೆರಾಮಿಕ್‌ನಲ್ಲಿ ಸೌಂದರ್ಯ

ಭಾನುವಾರ, ಮೇ 19, 2019
33 °C

ಸೆರಾಮಿಕ್‌ನಲ್ಲಿ ಸೌಂದರ್ಯ

Published:
Updated:

ಕಲಾವಿದರ ಕೈಗೆ ಯಾವುದೇ ವಸ್ತು ಸಿಕ್ಕರೂ ಅದನ್ನು ಸುಂದರವಾಗಿ ರೂಪಿಸುತ್ತಾರೆ. ಅವರ ಸೃಜನಶೀಲತೆಯ ಮೂಸೆಯೊಳಗೆ ಕಲೆ ಸಹ ಅರಳುತ್ತಾ ಹೋಗುತ್ತದೆ. ಹೊಸ ಹೊಸ ವಿನ್ಯಾಸದಲ್ಲಿ ಮೈದಳೆಯುತ್ತದೆ.ಕಲಾವಿದರಾದ ಬಿ.ಆರ್.ಪಂಡಿತ್ ಹಾಗೂ ಅಭಯ್ ಪಂಡಿತ್ ಅವರು ಕುಂಭಕಲಾ (ಸೆರಾಮಿಕ್ಸ್) ಕುಶಲಿಗಳು. ಇವರು ತಮ್ಮ ಕೈಗೆ ಸಿಕ್ಕ ಜೇಡಿ ಮಣ್ಣಿಗೆ ತಮ್ಮ ಮನೋ ಅಭಿವ್ಯಕ್ತಿಗನುಗುಣವಾಗಿ ಆಕೃತಿ ಕೊಟ್ಟು ಅದಕ್ಕೆ ಚೆಂದವಾಗಿ ಬಣ್ಣ ಲೇಪಿಸಿದ್ದಾರೆ. ಕುಂಭದ ಮೇಲೆ ವಿವಿಧ ಬಗೆಯ ಸೂಕ್ಷ್ಮ ಕಲಾಕೃತಿಗಳನ್ನು ಸಹ ಚಿತ್ರಿಸಿ ಅದರ ಅಂದವನ್ನು ಹೆಚ್ಚಿಸಿದ್ದಾರೆ. ಇವರು ರಚಿಸಿರುವ ಕ್ರಿಸ್ಟಲಿನ್ ವಾಸ್, ಕಾಪರ್ ರೆಡ್ ವಾಸ್, ವೈರ್‌ಕಟ್ ಪ್ಲಾಟರ್ ಮೊದಲಾದ ಕಲಾಕೃತಿಗಳು ಮನಸೆಳೆಯುತ್ತವೆ.ಸ್ಥಳ: ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್. ಪ್ರದರ್ಶನ ಮಂಗಳವಾರದಿಂದ ಗುರುವಾರದ ವರೆಗೆ. ಬೆಳಿಗ್ಗೆ 10.30 ರಿಂದ ಸಂಜೆ 7.30.  ಜ

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry