ಸೆರಾ ಸ್ಯಾನಿಟರಿವೇರ್ ಲಾಭ ರೂ.11 ಕೋಟಿ

7

ಸೆರಾ ಸ್ಯಾನಿಟರಿವೇರ್ ಲಾಭ ರೂ.11 ಕೋಟಿ

Published:
Updated:

ಬೆಂಗಳೂರು: `ಸೆರಾ ಸ್ಯಾನಿಟರಿವೇರ್ ಲಿ.~ ಕಂಪೆನಿ ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ರೂ.11.03 ಕೋಟಿ ನಿವ್ವಳ ಲಾಭದೊಂದಿಗೆ ಶೇ 44ರಷ್ಟು ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿನ ಲಾಭ ರೂ.7.65 ಕೋಟಿ ಇದ್ದಿತು.`ಕಂಪೆನಿಯ ಒಟ್ಟು ವರಮಾನ 2ನೇ ತ್ರೈಮಾಸಿಕದಲ್ಲಿ ರೂ.111.38 ಕೋಟಿಯಷ್ಟಿದ್ದು, ಶೇ 52ರಷ್ಟು ಹೆಚ್ಚಳವಾಗಿದೆ. ಈ ಸಾಲಿನ ಮೊದಲ 6 ತಿಂಗಳಲ್ಲಿ ರೂ.201.89 ಕೋಟಿ ಮೌಲ್ಯದ ಸರಕು ಮಾರಾಟ ಮಾಡಲಾಗಿದೆ.

 

ಹೊಸದಾಗಿ `ಎಚ್‌ಡಿ ಡಿಜಿಟಲ್ ವಾಲ್‌ಮತ್ತು ವೆಟ್ರಿಫೈಡ್ ಟೈಲ್ಸ್~ ಪರಿಚಯಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರೂ.500 ಕೋಟಿ ವಹಿವಾಟು ನಡೆಸುವ ವಿಶ್ವಾಸವಿದೆ~ ಎಂದು ಕಂಪೆನಿ ಅಧ್ಯಕ್ಷ ವಿಕ್ರಂ ಸೊಮಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry