ಶನಿವಾರ, ನವೆಂಬರ್ 16, 2019
24 °C

`ಸೆಲ್ಕಾನ್' ಪರಿಚಯಿಸಿದ `ಎ119 ಸ್ಮಾರ್ಟ್‌ಫೋನ್'

Published:
Updated:

ಹೈದರಾಬಾದ್: ಸೆಲ್ಕಾನ್ ಮೊಬೈಲ್ಸ್ ತನ್ನ `ಸಿಗ್ನೇಚರ್ ಎಚ್‌ಡಿ' ಸರಣಿಯಲ್ಲಿ ಹೊಸದಾಗಿ `ಎ119 ಸ್ಮಾರ್ಟ್‌ಫೋನ್'  ಬಿಡುಗಡೆ ಮಾಡಿದೆ.

ಆಟೊ ಫೋಕಸ್ 12 ಮೆಗಾಪಿಕ್ಸೆಲ್ ಕ್ಯಾಮೆರಾ, 3 ಎಂ.ಪಿ. ಫ್ರಂಟ್ ಕ್ಯಾಮೆರಾ, 1 ಜಿ.ಬಿ ರ್‍ಯಾಮ್, ಆಂಡ್ರಾಯ್ಡ ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ ಇರುವ ಈ ಸ್ಮಾರ್ಟ್‌ಫೋನ್ ಕೈಗೆಟುಕುವ (ರೂ. 13,499) ಬೆಲೆಗೆ ಲಭ್ಯವಿದೆ ಎಂದು `ಸೆಲ್ಕಾನ್ ಮೊಬೈಲ್ಸ್' ವ್ಯವಸ್ಥಾಪಕ ನಿರ್ದೇಶಕ ವೈ.ಗುರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.5.0 ಇಂಚು `ಐಪಿಎಸ್ ಹೈಡೆಫೆನಿಷನ್ ಡಿಸ್ಪ್ಲೆ'(ಎಚ್‌ಡಿ) ಸ್ಪರ್ಶಪರದೆ ಈ ಸ್ಮಾರ್ಟ್‌ಫೋನ್‌ನಲ್ಲಿದೆ. ಛಾಯಾಚಿತ್ರ, ಬಣ್ಣಗಳು ಅತ್ಯುತ್ತಮ ಗುಣಮಟ್ಟದಲ್ಲಿ ಗೋಚರಿಸುತ್ತವೆ. ಪರದೆ ಹೆಚ್ಚು ಪ್ರಖರಗೊಳಿಸಿದರೂ ಬ್ಯಾಟರಿ ಕಡಿಮೆ ಬಳಕೆ ಆಗುವುದು ವಿಶೇಷ. ಮೈ ಮ್ಯಾಂಗೊ, ಎಫ್ ಸೆಕ್ಯುರ್, ಒಪೆರಾ ಮಿನಿ, ನ್ಯೂಸ್ ಹಂಟ್ ಅಪ್ಲಿಕೇಷನ್ ಮೊದಲೇ ಅಳವಡಿಕೆಯಾಗಿವೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)