ಗುರುವಾರ , ನವೆಂಬರ್ 21, 2019
26 °C

ಸೆಲ್‌ಫೋನ್ ಇಲ್ಲದ ಸಹಾಯಕ ಚುನಾವಣಾಧಿಕಾರಿ!

Published:
Updated:

ಹೊನ್ನಾಳಿ: ಸಹಾಯಕ ಚುನಾವಣಾಧಿಕಾರಿಯೊಬ್ಬರು ಸೆಲ್‌ಫೋನ್ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿರುವ ವಿರಳ ಘಟನೆಯೊಂದು ಹೊನ್ನಾಳಿಯಿಂದ ವರದಿಯಾಗಿದೆ.ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಬಿ. ಆನಂದ ಎಂಬುವವರು ನಿಯೋಜನೆಗೊಂಡಿದ್ದು, ತಹಶೀಲ್ದಾರ್ ಟಿ.ವಿ. ಪ್ರಕಾಶ್ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ರಾಜು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬಿ. ಆನಂದ ಹಾಗೂ ಟಿ.ವಿ. ಪ್ರಕಾಶ್ ಮೊಬೈಲ್ ಫೋನ್ ಹೊಂದಿದ್ದು, ರಾಜು ಮೊಬೈಲ್ ಫೋನ್ ಹೊಂದಿಲ್ಲ. ಚುನಾವಣೆ ಸಂಬಂಧಿತ ಏನಾದರೂ ವಿಷಯ ವಿನಿಮಯಕ್ಕೆ ಸಹಾಯಕ ಚುನಾವಣಾಧಿಕಾರಿ ಒಬ್ಬರು ಮೊಬೈಲ್ ಫೋನ್ ಹೊಂದಿರದಿರುವುದರಿಂದ ತೀವ್ರ ತೊಂದರೆಯಾಗಿದೆ ಎಂಬುದು ಅಭ್ಯರ್ಥಿಗಳೂ ಸೇರಿದಂತೆ ಸಾರ್ವಜನಿಕರ ಆರೋಪ.ಸಹಾಯಕ ಚುನಾವಣಾಅಧಿಕಾರಿಯೊಬ್ಬರು ಸೆಲ್‌ಫೋನ್ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿರುವುದು ಹೊನ್ನಾಳಿ ಕ್ಷೇತ್ರದಸ ವಿಶೇಷ ಅಲ್ಲವೇ?

ಪ್ರತಿಕ್ರಿಯಿಸಿ (+)