ಸೆವೆನ್ ಅಪ್ ಅಂತಿಮ ಸುತ್ತಿನಲ್ಲಿ ನಗರದ ತಂಡ

7

ಸೆವೆನ್ ಅಪ್ ಅಂತಿಮ ಸುತ್ತಿನಲ್ಲಿ ನಗರದ ತಂಡ

Published:
Updated:
ಸೆವೆನ್ ಅಪ್ ಅಂತಿಮ ಸುತ್ತಿನಲ್ಲಿ ನಗರದ ತಂಡ

ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನೃತ್ಯ ಕಲಾವಿದರನ್ನು ಆಯ್ಕೆಮಾಡಲು ನಡೆಯುತ್ತಿರುವ `ಸೆವೆನ್ ಅಪ್ ಡ್ಯಾನ್ಸ್ ಫಾರ್ ಮಿ~ ಸ್ಪರ್ಧೆಯ ಅಂತಿಮ ಸುತ್ತಿಗೆ ಬೆಂಗಳೂರು ತಂಡ ಅರ್ಹತೆ ಪಡೆದಿದೆ.ದಕ್ಷಿಣ ಭಾರತದ 21 ನಗರಗಳಲ್ಲಿ ಸಂಚರಿಸಿ ಪ್ರತಿಭಾವಂತರಿಗಾಗಿ ವಿವಿಧ ಸುತ್ತಿನ ಸ್ಪರ್ಧೆಗಳನ್ನು ನಡೆಸಿ ಅವುಗಳಲ್ಲಿ ವಿಜೇತರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.ಕರ್ನಾಟಕ ಮತ್ತು ಕೇರಳದ 15 ತಂಡಗಳು ಗ್ರಾಂಡ್ ಫೈನಲ್‌ನ ಆಯ್ಕೆಗಾಗಿ ಪೈಪೋಟಿ ನಡೆಸಲಿವೆ. ಬೆಂಗಳೂರಿನ ಶ್ರೇಷ್ಠ ತಂಡಗಳಲ್ಲದೆ ಚೆನ್ನೈ, ಹೈದರಾಬಾದ್‌ಗಳ ಶ್ರೇಷ್ಠ ತಂಡಗಳು 51 ಲಕ್ಷ ರೂಪಾಯಿ ನಗದು ಬಹುಮಾನದ ಈ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನಡೆಸಲಿವೆ. ಅಲ್ಲು ಅರ್ಜುನ್ ಮತ್ತು ಸಿಂಬು ಈ ಹಂತಕ್ಕೆ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ.ಬೆಂಗಳೂರು, ಮೈಸೂರು, ಮಂಗಳೂರು, ತ್ರಿವೇಂಡ್ರಂ ಮತ್ತು ಕೊಚ್ಚಿಯ 138 ತಂಡಗಳು ಈ ಉತ್ಸಾಹಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರತಿ ನಗರದಿಂದ ಎರಡು ತಂಡಗಳು ಮತ್ತು ಗ್ರಾಹಕರ ಆನ್‌ಲೈನ್ ಮತದಾನದಿಂದ ಆಯ್ಕೆಯಾದ ಒಂದು ವೈಲ್ಡ್ ಕಾರ್ಡ್ ಎಂಟ್ರಿಯ ತಂಡಗಳು ಸೆಮಿಫೈನಲ್‌ನಲ್ಲಿ ಭಾಗವಹಿಸಿದ್ದವು. ಸಾಲ್ಸಾ ನೃತ್ಯಪಟುಗಳಾದ ಲಾರ್ಡ್ ವಿಜಯ್ ಮತ್ತು ಕೀರ್ತಿ ತೀರ್ಪುಗಾರರಾಗಿದ್ದರು.ತೀರ್ಪುಗಾರರು ಆಯ್ಕೆ ಮಾಡಿದ ಎರಡು ತಂಡಗಳಲ್ಲದೆ ಉಳಿದ ತಂಡಗಳು ಗ್ರಾಹಕರ ಆನ್‌ಲೈನ್ ಮತದಾನ ಪಡೆದು `ವೈಲ್ಡ್ ಕಾರ್ಡ್ ಎಂಟ್ರಿ~ ಮೂಲಕ ಗ್ರಾಂಡ್ ಫೈನಲ್ ಪ್ರವೇಶಿಸಬಹುದು. ಈ ಕುರಿತ ವಿವರಗಳು www.pepsicoindia.co.in ಜಾಲತಾಣದಲ್ಲಿ ಲಭ್ಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry