ಮಂಗಳವಾರ, ನವೆಂಬರ್ 12, 2019
28 °C
ಕ್ರಿಕೆಟ್: ಭಾರತದ ಆತಿಥ್ಯ

ಸೆ. 17ರಿಂದ ಚಾಂಪಿಯನ್ಸ್ ಲೀಗ್

Published:
Updated:

ನವದೆಹಲಿ (ಪಿಟಿಐ): ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಈ ವರ್ಷ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 6ರ ವರೆಗೆ ಭಾರತದಲ್ಲಿ ನಡೆಯಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.ಐದು ವರ್ಷಗಳ ಅವಧಿಯಲ್ಲಿ ಈ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿರುವುದು ಇದು ಮೂರನೇ ಸಲ. ಒಟ್ಟು 29 ಪಂದ್ಯಗಳು ಜರುಗಲಿದೆ. 2009ರ ಚೊಚ್ಚಲ ಚಾಂಪಿಯನ್ಸ್ ಲೀಗ್‌ನಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ರನ್ನರ್ ಅಪ್ ಆಗಿತ್ತು. ಸಿಡ್ನಿ ಸಿಕ್ಸರ್ ಪ್ರಶಸ್ತಿ ಜಯಿಸಿತ್ತು. 2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2011ರಲ್ಲಿ ಮುಂಬೈ ಇಂಡಿಯನ್ಸ್ ತಂಡಗಳು ಚಾಂಪಿಯನ್ ಆಗಿದ್ದವು.

ಐಪಿಎಲ್ ಆರನೇ ಆವೃತ್ತಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಗಳಿಸುವ ತಂಡಗಳು ಚಾಂಪಿಯನ್ಸ್ ಲೀಗ್‌ನಲ್ಲಿ ಆಡಲು ಅರ್ಹತೆ ಪಡೆಯಲಿವೆ. `ಚಾಂಪಿಯನ್ಸ್ ಲೀಗ್ ಯುವ ಕ್ರಿಕೆಟಿಗರಿಗೆ ತಮ್ಮ  ಪ್ರತಿಭೆ ತೋರಿಸಲು ವೇದಿಕೆಯಾಗಿದೆ. ಈ ಸಲದ ಟೂರ್ನಿಯಲ್ಲಿ ಪಾಕಿಸ್ತಾನದ ತಂಡವೂ ಪಾಲ್ಗೊಳ್ಳಲಿದೆ. ಐಪಿಎಲ್ ಮುಗಿದ ನಂತರ ಚಾಂಪಿಯನ್ಸ್ ಲೀಗ್‌ನ ಪಂದ್ಯಗಳನ್ನು ನಡೆಸಲು ಸ್ಥಳ ನಿಗದಿ ಮಾಡಲಾಗುತ್ತದೆ' ಎಂದು ಚಾಂಪಿಯನ್ಸ್ ಲೀಗ್ ಆಡಳಿತ ಮಂಡಳಿಯ ಮುಖ್ಯಸ್ಥ ಎನ್. ಶ್ರೀನಿವಾಸನ್ ಶುಕ್ರವಾರ ತಿಳಿಸಿದರು.

ಪ್ರತಿಕ್ರಿಯಿಸಿ (+)