ಸೆ. 21, 22 ಬಿಕೆಎಫ್‌ ಸಂಗೀತ

7

ಸೆ. 21, 22 ಬಿಕೆಎಫ್‌ ಸಂಗೀತ

Published:
Updated:

ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ಉಚಿತ ಡಯಾಲಿಸಿಸ್ ಚಿಕಿತ್ಸೆಯ ಸಹಾಯಾರ್ಥ ಪ್ರತಿವರ್ಷದಂತೆ ಸಂಗೀತ ದಿಗ್ಗಜರ ಕಛೇರಿಯನ್ನು ಸೆ.21 ಮತ್ತು 22ರಂದು ಏರ್ಪಡಿಸಿದೆ. ಧ್ವನಿ– -ಬಿಕೆಎಫ್ ಸಹಯೋಗದಲ್ಲಿ  ಪಂಡಿತ್ ಮಲ್ಲಿಕಾರ್ಜುನ ಮನ್ಸೂರ ಅವರ ಸ್ಮರಣಾರ್ಥದ ಸಂಗೀತ ಸಮ್ಮೇಳನದಲ್ಲಿ ಈ ಬಾರಿ ಡಾ.ಅಶ್ವಿನಿ ಭಿಡೆ ಅವರಿಗೆ ಪ್ರಸಕ್ತ ಸಾಲಿನ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಸೆ. 21ರ ಸಂಜೆ 6ಕ್ಕೆ ಸಮ್ಮೇಳನಕ್ಕೆ ಚಾಲನೆ. ಜಯನಗರ ಎಂಟನೇ ಬ್ಲಾಕ್‌ನಲ್ಲಿರುವ ಜೆ.ಎಸ್. ಎಸ್. ಸಭಾಂಗಣದಲ್ಲಿ ನಡೆಯುವ ಸಮಾರಂಭದ ಆರಂಭಿಕ ಕಛೇರಿ ಆರತಿ ಅಂಕಲೀಕರ್ ಅವರದು.ಡಾ.ಅಶ್ವಿನಿಗೆ ಮನ್ಸೂರ ಪ್ರಶಸ್ತಿ

ಎರಡನೇ ದಿನವಾದ ಭಾನುವಾರ ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭ. ಜೈಪುರ-–ಅತ್ರೌಲಿ ಘರಾಣೆಯ ಖ್ಯಾತ ಸಂಗೀತಗಾರ್ತಿ ಡಾ. ಅಶ್ವಿನಿ ಭಿಡೆ ಅಪರೂಪದ ಮುಂಜಾನೆ ರಾಗಗಳನ್ನು ಪ್ರಸ್ತುತಪಡಿಸುವರು. ದಿವಂಗತ ಮಲ್ಲಿಕಾರ್ಜುನ ಮನ್ಸೂರ ಅವರೂ ಜೈಪುರ-– ಅತ್ರೌಲಿ ಘರಾಣೆಯ ಗಾಯಕರಾಗಿದ್ದರು ಎಂಬುದು ಗಮನಾರ್ಹ.ಅಂದು ಸಂಜೆ 6ರಿಂದ 9ರವರೆಗೆ ಮೋಹನ ವೀಣೆಯ ಪ್ರಸಿದ್ಧ ಕಲಾವಿದರಾದ ಪಂಡಿತ್ ವಿಶ್ವಮೋಹನ್ ಭಟ್ ಅವರಿಂದ ಕಛೇರಿ. ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿ ಪುರಸ್ಕೃತರಾಗಿರುವ ವಿಶ್ವಮೋಹನ್ ಭಟ್, ಮೋಹನ ವೀಣೆ ವಾದ್ಯವನ್ನು ವಿಶ್ವದಾದ್ಯಂತ ಪ್ರಸಿದ್ಧಿಗೊಳಿಸಿರುವುದಲ್ಲದೆ ಅದನ್ನು ಹಿಂದೂಸ್ತಾನಿ ಸಂಗೀತ ಪ್ರಕಾರಕ್ಕೆ ಅಳವಡಿಸಿರುವ ಅಪರೂಪದ ಕಲಾವಿದ.ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು 49 ರೂಪಾಯಿಗಳ ದೇಣಿಗೆ ಪಾಸ್ ನಿಗದಿಪಡಿಸಲಾಗಿದೆ. ಈ ಪಾಸ್‌ಗಳು ಎಂ.ಜಿ. ರಸ್ತೆಯ ಕೆ. ಸಿ. ದಾಸ್, ಜಯನಗರ 3ನೇ ಬ್ಲಾಕ್‌ನಲ್ಲಿರುವ ಕ್ಯಾಲಿಪ್ಸೊ ಮತ್ತು ಜಯನಗರ 7ನೇ ಬ್ಲಾಕ್‌ನಲ್ಲಿರುವ ‘ಚಾನೆಲ್ 9’ರಲ್ಲಿ ದೊರೆಯುತ್ತವೆ.

1979ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆಯು ಬಡವರು ಮತ್ತು ಎಲ್ಲ ಭಾಗದ ಜನತೆ ಸೇರಿದಂತೆ ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಮೂತ್ರಕೋಶ- ಮೂತ್ರಪಿಂಡ ರೋಗಗಳಿಗೆ ಚಿಕಿತ್ಸೆ ನೀಡುವ ನೋಡಲ್ ಆಸ್ಪತ್ರೆಯಾಗಿದ್ದು, ಈ ಸಂಗೀತ ಸಮ್ಮೇಳನದಲ್ಲಿ ಸಂಗ್ರಹವಾದ ಮೊತ್ತವನ್ನು ಉಚಿತ ಡಯಾಲಿಸಿಸ್‌ಗೆ ಬಳಸುತ್ತಿದೆ.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಗುರುಪ್ರಸಾದ್- 98454 24053.  ವೆಬ್‌ಸೈಟ್ www.bkfindia.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry